ಜೆಡಿಎಸ್‌ ಪಕ್ಷ ಕಟ್ಟುವುದಕ್ಕಾಗಿ ಎಚ್‌ಡಿಕೆ ಸ್ಪರ್ಧೆ: ಸಚಿವ ಚಲುವರಾಯಸ್ವಾಮಿ ಆರೋಪ

| Published : Mar 30 2024, 12:57 AM IST / Updated: Mar 30 2024, 01:37 PM IST

ಜೆಡಿಎಸ್‌ ಪಕ್ಷ ಕಟ್ಟುವುದಕ್ಕಾಗಿ ಎಚ್‌ಡಿಕೆ ಸ್ಪರ್ಧೆ: ಸಚಿವ ಚಲುವರಾಯಸ್ವಾಮಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಿಎಂ ಪಕ್ಷ ಕಟ್ಟುವುದಕ್ಕಾಗಿ ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಾರೆಯೇ ವಿನಃ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾಜಿ ಸಿಎಂ ಪಕ್ಷ ಕಟ್ಟುವುದಕ್ಕಾಗಿ ಮಂಡ್ಯದಲ್ಲಿ ಸ್ಪರ್ಧಿಸುತ್ತಿದ್ದಾರೆಯೇ ವಿನಃ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಲೇವಡಿ ಮಾಡಿದರು.

ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗ ಲೋಕಸಭೆ ಚುನಾವಣೆ ಹಿನ್ಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಅಭ್ಯರ್ಥಿ ಉದ್ಯಮಿಯಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ನೀವು ಕರೆದಾಗ ನಿಮ್ಮ ಮುಂದೆ ಬರುತ್ತಾರೆ. ಆದರೆ, ಕುಮಾರಸ್ವಾಮಿ ಅವರು ಬರುತ್ತಾರಾ. 

ಮಳವಳ್ಳಿಯವರು ಒಮ್ಮೆ ಎಂಪಿಯಾಗಿ ಗೆಲ್ಲಿಸಿದ್ದೀರಿ, ನಾವು ನೀವು ಭಾವನ್ಮಾತಕವಾಗಿ ಅವರಿಗೆ ಬಲಿ ಆಗಿದ್ದೇವೆ. ಪಕ್ಷ ಕಟ್ಟಲು ಬರುವುದಾದರೆ ಅವರು ಬರುವುದು ಬೇಡ, ನಮ್ಮದೇ ಸರ್ಕಾರ ಇದೆ. ನಾವೆಲ್ಲರೂ ಒಟ್ಟಾಗಿ ನಾಲ್ಕು ವರ್ಷ ಕೆಲಸ ಮಾಡುತ್ತೇವೆ, ನಮ್ಮಿಂದ ಏನಾದರೂ ತಪ್ಪಾದರೆ ಅಷ್ಟೂ ಜನರು ಮನೆಗೆ ಹೋಗುತ್ತೀವೆ. ಆಗ ಹೊಸದಾಗಿ ಇವರನ್ನು ಆಯ್ಕೆ ಮಾಡಿಕೊಳ್ಳಲಿ ಎಂದರು.

ಜಿಲ್ಲೆಯಲ್ಲಿ ಎಂದಾದರೂ ಧರ್ಮ ಮತ್ತು ಜಾತಿಗಳ ಮಧ್ಯೆ ಜಗಳ ಆಗಿದ್ದೀಯಾ, ಯಾವುದೇ ಬೇಧಭಾವವಿಲ್ಲದೇ ಬದುಕು ನಡೆಸುತ್ತಿದ್ದಾರೆ. ಜಿಲ್ಲೆಯ ಅಬಿವೃದ್ದಿಗೆ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಒಗ್ಗಟ್ಟನನ್ನು ಸಹಿಸದ ಭಾವನಾತ್ಮಕವಾಗಿ ಜನರ ಮನಸ್ಸನ್ನು ಗೆಲ್ಲಲು ಹೊರಟಿದ್ದಾರೆ. ಇವರ ನಾಟಕ ಜಿಲ್ಲೆಯಲ್ಲಿ ನಡೆಯುವುದಿಲ್ಲ ಎಂದರು.

ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಶಾಸಕರಾದ ಪಿ. ರವಿಕುಮಾರ್, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮದು ಜಿ ಮಾದೇಗೌಡ, ಮಾಜಿ ಸದಸ್ಯ ಜಿ. ರಾಮಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಶಿವಣ್ಣ, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಎನ್. ಸುರೇಶ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ಅಂಜನಾ ಶ್ರೀಕಾಂತ್, ಮುಖಂಡರಾದ ಬಿ.ಆರ್. ರಾಮಚಂದ್ರ, ಡಾ.ಮೂರ್ತಿ, ಆರ್.ಎನ್. ವಿಶ್ವಾಸ್, ಚಿದಬರಂ, ವೆಂಕಟೇಗೌಡ, ಬಿ. ಪುಟ್ಟಬಸವಯ್ಯ, ಸುಷ್ಮಾ ರಾಜು, ಸುಜಾತಾ ಕೆ.ಎಂ.ಪುಟ್ಟು, ಸವಿತಾ, ದ್ಯಾಪೇಗೌಡ, ಕುಂದೂರು ಪ್ರಕಾಶ್, ಪ್ರಮೀಳಾ, ಸಿ.ಎಂ.ದ್ಯಾವಪ್ಪ, ಸಿದ್ದೇಗೌಡ, ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಕೆ.ಜೆ. ದೇವರಾಜು ಇದ್ದರು.