ಸಾರಾಂಶ
ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.ಸದ್ಯದಲ್ಲಿ ಯಾವುದೇ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತಿಲ್ಲ. ಹೀಗಾಗಿ ನಾನು ಯಾವುದೇ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡರ ಜೊತೆಗೆ ಸುಮಾರು 30 ವರ್ಷಗಳಿಂದ ಸಂಬಂಧವಿದೆ. ಹೀಗಾಗಿ ಅವರೊಡನೆ ಮಾತನಾಡುವುದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ಇನ್ನು, ಈಗಿನ ಸಂಸದ ಪ್ರತಾಪ್ ಸಿಂಹ ಅವರು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ನಡುವೆ ತಮ್ಮ ಗುರಿ ಕೇವಲ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಸಿಎಂ ಆಗಿಸುವುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮೈಸೂರು: ಬಿಜೆಪಿಯ ಮಂಡಲ ಅಧ್ಯಕ್ಷರ ನೇಮಕಮೈಸೂರು ಜಿಲ್ಲೆಯ ಮಂಡಲ ಅಧ್ಯಕ್ಷರಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.ಟಿ. ನರಸೀಪುರ- ಶಿವಕುಮಾರ್ ಸತ್ಯರಾಜ್, ಹುಣಸೂರು ನಗರ- ಟಿ.ಡಿ. ನಾರಾಯಣ್, ಹುಣಸೂರು ಗ್ರಾಮಾಂತರ- ಕಾಂತರಾಜ್, ಪಿರಿಯಾಪಟ್ಟಣ- ರಾಜೇಂದ್ರ, ನಂಜನಗೂಡು ನಗರ- ಸಿದ್ದರಾಜು, ನಂಜನಗೂಡು ಗ್ರಾಮಾಂತರ- ಎಚ್.ಎಂ. ಕೆಂಡಗಣ್ಣಪ್ಪ, ಎಚ್.ಡಿ. ಕೋಟೆ- ಶಂಭೇಗೌಡ, ಸರಗೂರು- ಕೆ.ಪಿ. ಗುರುಸ್ವಾಮಿ, ಕೆ.ಆರ್. ನಗರ- ಧರ್ಮ, ಸಾಲಿಗ್ರಾಮ- ಸಾರಾ ತಿಲಕ್.