ನಿನ್ನೆ-ಮೊನ್ನೆ ಪೆನ್‌ಡ್ರೈವ್ ಹಂಚಿ ನಾನು ಎಂಎಲ್‌ಸಿ ಆಗಿಲ್ಲ : ಸೂರಜ್‌ ರೇವಣ್ಣ ವಾಗ್ದಾಳಿ

| Published : Jan 03 2025, 12:55 PM IST

Suraj Revanna

ಸಾರಾಂಶ

ಮೂಡಲಹಿಪ್ಪೆಯಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮತ್ತೆ ನಿಮ್ಮ ಸೂರಜ್‌ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ಟುತ್ತಾನೆ ಎಂದು ಬೆಂಬಲಿಗರಿಗೆ ಆಶ್ವಾಸನೆ ನೀಡಿದ್ದಾರೆ.

ಚನ್ನರಾಯಪಟ್ಟಣ : ಮೂಡಲಹಿಪ್ಪೆಯಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮತ್ತೆ ನಿಮ್ಮ ಸೂರಜ್‌ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ಟುತ್ತಾನೆ ಎಂದು ಬೆಂಬಲಿಗರಿಗೆ ಆಶ್ವಾಸನೆ ನೀಡಿದ್ದಾರೆ.

ಸೂರ್ಯ ಹುಟ್ಟುವುದು ಒಂದೇ ಅಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ. ನಿಮ್ಮ ಪ್ರಜ್ವಲ್ ಅಣ್ಣನೂ ಅಷ್ಟೇ, ನಿಮ್ಮ ಸೂರಜ್ ಅಣ್ಣನೂ ಅಷ್ಟೇ, ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ ಎಂದರು.

ಕೆಲವು ಅಧಿಕಾರಿಗಳು, ಕೆಲವು ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡ್ತಿದ್ದಾರೆ ನೋಡ್ತಾ ಇದ್ದೀವಿ. ಯಾವುದು ಶಾಶ್ವತವಲ್ಲ, ಯಾವ ಸರ್ಕಾರವೂ ಶಾಶ್ವತ ಅಲ್ಲ. ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂತೆಂಥವರು ಏನೇನ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.

ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತೆ. ಈ ದ್ವೇಷದ ರಾಜಕಾರಣ ಉಳಿಯಲ್ಲ. ನಿಮಗೆ 135 ಸೀಟ್ ಕೊಟ್ಟಿರೋದು ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಅಂತ. ಅದನ್ನು ಬಿಟ್ಟು ದಿನ ಬೆಳಿಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬವನ್ನು ಹೇಗೆ ಮುಳುಗೀಸೋದು ಬರಿ ಇದೆ ಆಗೋಯ್ತು ಎಂದು ಕಿರಿಕಾರಿದರು.

ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು?, ಯಾವ ರೈತರಿಗೆ ಒಳ್ಳೆಯದಾಗಿದೆ? ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ. ಮತ್ತೆ ನಿಮ್ಮ ಒಳ್ಳೆಯದಾಗಿದೆ? ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ. ಮತ್ತೆ ನಿಮ್ಮ ಸೂರಜ್‌ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ಟುತ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ. ಈ ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕುಣಿಯುತ್ತಿದ್ದಾರೆ ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತೆ ಎಂದು ಎಚ್ಚರಿಸಿದರು.

ನಿನ್ನೆ-ಮೊನ್ನೆ ಪೆನ್‌ಡ್ರೈವ್ ಹಂಚಿ ನಾನು ಎಂಎಲ್‌ಸಿ ಆಗಿಲ್ಲ. ನಿಮ್ಮ ತಾತನ ಥರ ಕುತಂತ್ರ ಮಾಡಿ ಎಂಎಲ್‌ಸಿ ಆಗಿದ್ದಲ್ಲ ಎಂದು ಸಂಸದ ಶ್ರೇಯಸ್‌ ಪಟೇಲ್‌ ವಿರುದ್ಧ ಗುಡುಗಿದರು.

ದೇವೇಗೌಡರ, ರೇವಣ್ಣ ಅವರ ಕುಟುಂಬಗಳನ್ನು ಮುಗಿಸುತ್ತಾರಂತೆ. ನನಗೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿರಲಿಲ್ಲ. ಇದೇ 25 ವರ್ಷದ ಹಿಂದೆ ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆ ಅವರ ತಾತ ನಮ್ಮ ಅಜ್ಜಿ, ತಾಯಿ ಮೇಲೆ ಆಸಿಡ್ ಎರಚಿಸಿದನ್ನು ಯಾರೂ ಮರೆಯಬಾರದು ಎಂದರು. ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತದೆ. ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತನವರ ತಮ್ಮನ ಮಕ್ಕಳಿಂದಲೇ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರವಾದ ಸ್ಥಳದಲ್ಲಿ ಆಸಿಡ್ ಎರಚಿಸಿದರು. ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತು ಸಂಕಷ್ಟ ಬಂದಿತ್ತು. ಆವತ್ತು ಕೂಡ ಇದೇ ಕಾಂಗ್ರೆಸ್ ಸರ್ಕಾರ ಇತ್ತು. ಇಂದು 135 ಸೀಟ್, ಅವತ್ತು 130 ಸೀಟ್ ಅಷ್ಟೇ ವ್ಯತ್ಯಾಸ ಎಂದು ಹೇಳಿದರು.

ದೇವೇಗೌಡರು, ರೇವಣ್ಣ ಅವರ ಕುಟುಂಬ ಮುಗಿಸಬೇಕು ಎನ್ನುವುದೊಂದೇ ಅವರ ಉದ್ದೇಶವಾಗಿದೆ. ಇದೇ 25 ವರ್ಷಗಳ ಹಿಂದೆ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು, ಆದರೆ ಏನಾಯ್ತು ಸ್ವಾಮಿ? ಇದೂ ಅದೇ ರೀತಿಯ ಒಂದು ಅನುಭವ ಎಂದರು.