ಸಾರಾಂಶ
ಬಂಗಾರಪೇಟೆ : ಜೆಡಿಎಸ್‌ನ ಮಲ್ಲೇಶಬಾಬು ಸಂಸದರಾದರೆ ಕ್ಷೇತ್ರವನ್ನು ಬಂಗಾರ ಮಾಡುವರು ಎಂಬ ಭ್ರಮೆಯಿಂದ ಅವರನ್ನು ಜನತೆ ಗೆಲ್ಲಿಸಿದ್ದಾರೆ. ಈಗ ಅವರು ಏನು ಮಾಡುವರೆಂದು ನಾನು ನೋಡುವೆ. ಅವರಿಂದ ಕ್ಷೇತ್ರಕ್ಕೆ ೫೦ಲಕ್ಷ ರು.ಗಳ ವೆಚ್ಚದ ಕಾಮಗಾರಿ ನಡೆದರೆ ತಾವು ಸಂಸದ ಕಾಲು ಕಳೆಗೆ ನುಸುಳುತ್ತೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸವಾಲು ಹಾಕಿದರು.ತಾಲೂಕಿನ ಕಾಮಸಮುಸ್ರ ಗ್ರಾಮದಿಂದ ಪಟ್ಟಣದ ದೇಶಿಹಳ್ಳಿವರೆಗೂ ಎಸ್‌ಎಚಿಡಿಪಿ ಯೋಜನೆಯಲ್ಲಿ 20 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ಮಾಡಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು.
ಸಂಸದರು ಅನುದಾನ ತರಲಿ
ಕಾಮಸಮುದ್ರ ಗ್ರಾಪಂ ಅಧ್ಯಕ್ಷರಾದ ಆದಿನಾರಾಯಣ ರವರು ಎಲ್ಲ ತಮ್ಮಿಂದ ಸೌಲಭ್ಯಗಳನ್ನು ಪಡೆದು ಲೋಕಸಭೆ ಚುನಾವಣೆಯಲ್ಲಿ ಮೋಸ ಮಾಡಿ ಶಾಸಕರಿಂದ ಏನು ಅಭಿವೃದ್ದಿಯಾಗದು ಎಂದು ಅಪಪ್ರಚಾರ ಮಾಡಿ ಜೆಡಿಎಸ್ ಬೆಂಬಲಿಸಿದರು. ಸಂಸದ ಮಲ್ಲೇಶಬಾಬುರಿಂದ ಕ್ಷೇತ್ರಕ್ಕೆ ಹಾಗೂ ಕಾಮಸಮುದ್ರ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ತರಲಿ ಎಂದು ಒತ್ತಾಯಿಸಿದರು.
ಅಭಿವೃದ್ದಿ ಮಾಡುವುದಕ್ಕೆ ದಿಲ್ ಇರಬೇಕು. ತಾವು ಜನರ ನಾಡಿ ಮಿಡಿತ ಅರಿತು ಕೆಲಸ ಮಾಡಿರುವುದರಿಂದ ಯಾರು ಎಷ್ಟೇ ರಾಜಕೀಯವಾಗಿ ತುಳಿಯಲು ಯತ್ನಿಸಿದರೂ ಜನರು ನನ್ನ ಅಭಿವೃದ್ದಿ ಕಾರ್ಯಗಳನ್ನು ಗಮನಿಸಿ ಬೆಂಬಲ ನೀಡುತ್ತಿರವುದರಿಂದ ಫೀನಿಕ್ಸ್‌ನಂತೆ ಎದ್ದು ಬರುತ್ತಿರುವೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.ಟೀಕೆಗೆ ಕಾಮಗಾರಿಗಳೇ ಉತ್ತರ
ವಿಪಕ್ಷಗಳು ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಹಣವಿಲ್ಲ ಎಲ್ಲ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಟೀಕಿಸುತ್ತಿದ್ದವರಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳೇ ಉತ್ತರವಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ದಿಗೆ ಒತ್ತು ನೀಡುತ್ತಿದೆ,ಇನ್ನು ೬ತಿಂಗಳು ಸಮಯ ನೀಡಿ ಕ್ಷೇತ್ರದಲ್ಲಿ ಏನೆಲ್ಲಾ ಕಾಮಗಾರೊಗಳು ಬಾಕಿ ಇದೆಯೋ ಅವುಗಳನ್ನು ಪೂರ್ಣಗೊಳಿಸುವೆ ಎಂದರು.
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ವಿಪಕ್ಷಗಳಿಗೆ ಸಹಿಸಿಕೊಳ್ಳಲು ಆಗದೆ ಪತಣಗೊಳಿಸಲು ಬಿಸಿ ಎಣ್ಣೆಯಲ್ಲಿ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಸರ್ಕಾರವನ್ನು ಪತನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. 5 ವರ್ಷ ಸರ್ಕಾರ ಸ್ಥಿರವಾಗಿರುತ್ತದೆ, 5 ಗ್ಯಾರಂಟಿ ಯೋಜನೆಗಳೂ ನಿಲ್ಲುವುದಿಲ್ಲ ಎಂದರಲ್ಲದೆ ಜನರಿಗೆ ಸಹಾಯ ಮಾಡಿದ ಸರ್ಕಾರವನ್ನು ಮುಂದೆ ಸಹ ಜನರು ಬೆಂಬಲಿಸಬೇಕೆಂದು ಮನವಿ ಮಾಡಿದರು.ಗ್ರಾಪಂ ಅಧ್ಯಕ್ಷಗೆ ತರಾಟೆ
ಕಾಮಸಮುದ್ರದಿಂದ ಕೆಜಿಎಫ್ ರಸ್ತೆ ಹಾಗೂ ಕಾಮಸಮುದ್ರದಿಂದ ತೊಪ್ಪನಹಳ್ಳಿವರೆಗೂ ರಸ್ತೆ ಹಾಳಾಗಿದ್ದು ಅದನ್ನೂ ಅಭಿವೃದ್ದಿಗೊಳಿಸುವ ಬಗ್ಗೆ ಭರವಸೆ ನೀಡಿದರು. ಈ ದಿನದ ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯರನ್ನು ಹೋಗದಂತೆ ಅಧ್ಯಕ್ಷ ಆದಿನಾರಾಯಣ ಸೂಚಿಸಿರುವುದಕ್ಕೆ ಶಾಸಕರು ಕೆಂಡಾಮಂಡಲರಾಗಿ ಬಹಿರಂಗವಾಗಿ ತರಾಟೆ ತೆಗೆದುಕೊಂಡರು.ಸಭೆಯಲ್ಲಿ ಭೂಬ್ಯಾಂಕಿನ ಅಧ್ಯಕ್ಷ ಹೆಚ್.ಕೆ.ನಾರಾಯಣಸ್ವಾಮಿ,ಪುರಸಭೆ ಅಧ್ಯಕ್ಷ ಗೋವಿಂದ,ಸಮಾಜ ಸೇವಕ ಮುನಿರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜ್,ಕೆಟಿಆರ್,ಮಂಜುನಾಥಗೌಡ,ಎಸ್.ಎಕ್.ಜಯಣ್ಣ,ಮಹಾದೇವ್,ಪ್ರಭಕಾರ್ ರೆಡ್ಡಿ,ಬೆಸ್ಕಾಂ ಎಇಇ ರಾಜು,ರಂಗಾಚಾರಿ,ಪಿಡಬ್ಲ್ಯೂಡಿ ಎಇಇ ರವಿ ಇತರರು ಇದ್ದರು.