ಹುತಾತ್ಮರನ್ನು ಮರೆತರೆ ದೇಶಕ್ಕೆ ಭವಿಷ್ಯ ಇಲ್ಲ

| Published : Jul 25 2024, 01:23 AM IST

ಸಾರಾಂಶ

೧೯೬೨ ೧೯೬೫,೧೯೭೧ ಯುದ್ದಗಳಲ್ಲಿ ಆಧುನಿಕ ಶಾಸ್ತ್ರಾಶ್ತ್ರ ಇಲ್ಲದಿದ್ದರೂ ಹೋರಾಟ ನಡೆಸಿ ಗೆಲವಿನ ಅಂಚಿಗೆ ಬಂದಾಗ ನಮ್ಮ ದೇಶದ ರಾಜಕಾರಣಿಗಳು ಪ್ರಭಾವಿ ರಾಷ್ಟ್ರಗಳ ಒತ್ತಡಕ್ಕೆ ಮಣಿಯುವ ಮೂಲಕ ಯುದ್ದದ ಗೆಲುವನ್ನು ನಮ್ಮಿಂದ ದೂರ ಮಾಡಿದರು.

ಕನ್ನಡಪ್ರಭ ವಾರ್ತೆ ಮಾಲೂರು

ಪ್ರತಿ ಯುದ್ಧದಲ್ಲಿ ಇದ್ದ ಶಸ್ತ್ರಾಸ್ತ್ರಗಳಲ್ಲಿಯೇ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ಗೆಲವಿಗೆ ಕಡೆ ಹೋದ ನಮ್ಮ ಕೆಚ್ಚದೆ ಸೈನಿಕರು ಗೆಲುವ ಹಂತಕ್ಕೆ ಬಂದಿದ್ದರೂ ನಮ್ಮ ರಾಜಕಾರಣಿಗಳ ರಾಜಕೀಯ ಪಾಲಿಸಿಯಿಂದ ಪ್ರತಿ ಯುದ್ದವು ಗೆಲವಿನಿಂದ ದೂರವಾಗುವಂತಾಯಿತು ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಕಾರ್ಗಿಲ್‌ ವಿಜಯದ ೨೫ ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಧರ್ಮರಾಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮುಟ್ಟಿದ್ರೆ ತಟ್ಟಿಬಿಡ್ತೀವಿ ಎಂಬ ಭಾರತೀಯ ಸೇನೆಯ ರಣಘೋಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣ ಕೊಟ್ಟ ವೀರರನ್ನು ಮರೆತರೆ ದೇಶಕ್ಕೆ ಭವಿಷ್ಯ ಇಲ್ಲ ಎಂದರು.

ರಾಜಕೀಯ ನೀತಿಯಿಂದ ಸೋಲು

ಕಾರ್ಗಿಲ್‌ ಯುದ್ದಕ್ಕೆ ಕಾರಣ, ಯುದ್ದ ಗೆದ್ದ ಬಗ್ಗೆ, ಹೋರಾಟ ಮಾಡಿ ವೀರಮರಣ ಅಪ್ಪಿದ ಯೋಧರ ಮಾಹಿತಿ, ಯುದ್ದ ದಲ್ಲಿ ಸೈನಿಕರ ಪಟ್ಟ ಪಾಡು ಗಳನ್ನು ಟಿ.ವಿ.ಪರದೆ ಮೇಲೆ ಪ್ರಾತ್ಯಾಕ್ಷತೆ ಮೂಲಕ ಅವರು ವಿವರಿಸಿದರು. ೧೯೬೨ ೧೯೬೫,೧೯೭೧ ಯುದ್ದಗಳಲ್ಲಿ ಆಧುನಿಕ ಶಾಸ್ತ್ರಾಶ್ತ್ರ ಇಲ್ಲದಿದ್ದರೂ ಹೋರಾಟ ನಡೆಸಿ ಗೆಲವಿನ ಅಂಚಿಗೆ ಬಂದಾಗ ನಮ್ಮ ದೇಶದ ರಾಜಕಾರಣಿಗಳು ಪ್ರಭಾವಿ ರಾಷ್ಟ್ರಗಳ ಒತ್ತಡಕ್ಕೆ ಮಣಿಯುವ ಮೂಲಕ ಯುದ್ದದ ಗೆಲುವನ್ನು ನಮ್ಮಿಂದ ದೂರ ಮಾಡಿದರು. ಆದರೆ ಕಾರ್ಗಿಲ್‌ ಯುದ್ದದಲ್ಲಿ ನಮ್ಮ ಸೈನಿಕರ ಪಾಕಿಸ್ತಾನ ವಿರುದ್ಧದ ಸಾಧಿಸಿದ ಗೆಲವು ಮರೆಯಲು ಸಾಧ್ಯವಿಲ್ಲ ಎಂದರು.ನಮ್ಮ ದೇಶಕ್ಕೆ ಮೂರು ಕಡೆ ಸಮುದ್ರ,ಇನ್ನೊಂದಡೆ ಹಿಮಾಲಯ ಮೂಲಕ ಪ್ರಕೃತಿಯೇ ರಕ್ಷಣೆ ನೀಡುತ್ತಿದೆ. ಆದರೆ ಉಳಿದಿರುವ ಇನ್ನೊಂದು ದಿಕ್ಕಿನಲ್ಲಿರುವ ಪಕ್ಕದ ರಾಷ್ಟ್ರಗಳು ನಮ್ಮ ವಿರೋಧಿಗಳಾಗಿ ಸದಾ ತೊಂದರೆ ನೀಡುತ್ತಿದ್ದಾರೆ. ಇದರಿಂದ ನಮ್ಮ ದೇಶದ ಗಡಿಭಾಗವಾದ ೧೪ ಸಾವಿರ ಕಿ.ಮೀ.ಉದ್ದಕ್ಕೂ ನಮ್ಮ ಸೈನಿಕರು ಗಡಿಕಾಯಬೇಕಾಗಿದೆ ಎಂದರು.