ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೈ.ಎ. ನಾರಾಯಣಸ್ವಾಮಿ ರವರಿಗೆ ಮತ್ತೊಮ್ಮೆ ವಿಧಾನಪರಿಷತ್‌ಗೆ ಕಳುಹಿಸುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆ ವಿನಃ ಕಾಂಗ್ರೆಸ್ ಪಕ್ಷದ ಸುಳ್ಳು ಗ್ಯಾರಂಟಿ ಯೋಜನೆಗಳಿಗೆ ಮರುಳಾಗಿ ಮತ ನೀಡಿದರೆ ಪಶ್ಚಾತಾಪ ಪಡುವುದು ಖಚಿತ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ. ಮಹೇಶ್ ಹೇಳಿದರು.ಅವರು ಬೆಮಲ್ ನಗರದಲ್ಲಿರುವ ಜೈನ್ ಶಾಲೆ ಹಾಗೂ ಲಿಟಲ್ ಪ್ಲವರ್ ಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ವೈ.ಎ.ನಾರಾಯಣಸ್ವಾಮಿ ಪರವಾಗಿ ಶಿಕ್ಷಕರಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಹುತೇಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಬಡ್ತಿ ವೇತನ ಸೇರಿದಂತೆ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಹೆಸರಿನಲ್ಲಿ ರಾಜಕೀಯ ಮಾಡಿದ್ದೇ ಸಾಧನೆಯಾಗಿದೆ. ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನು ರದ್ದು ಮಾಡಿತು, ಆದರೆ ಗುಣಮಟ್ಟದ ಶಿಕ್ಷಣ ಜಾರಿಗೆ ತರಲು ಮುಂದಾಗಿಲ್ಲ. ಇದರ ಪರಿಣಾಮ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವೇ ಸಾಕ್ಷಿ ಎಂದು ಆರೋಪಿಸಿದರು.
ವೈ.ಎ.ನಾರಾಯಣಸ್ವಾಮಿ ಮೂರು ಬಾರಿ ಪರಿಷತ್ ಸದಸ್ಯರಾಗಿ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಸದಾ ಕಾಲ ಸಿಗುವ ವ್ಯಕ್ತಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದಂತೆ ಈ ಚುನಾವಣೆಯಲ್ಲಿಯೂ ಎಲ್ಲರೂ ಒಂದಾಗಿ ಕೆಲಸ ಮಾಡಿ ಆಡಳಿತ ಪಕ್ಷಕ್ಕೆ ಮೈತ್ರಿಯ ಪವರ್ ಏನೆಂಬುದನ್ನು ತೋರಿಸಬೇಕೆಂದು ಮನವಿ ಮಾಡಿದರು.ಜಿಪಂ, ತಾಪಂ ಚುನಾವಣೆಗೆ ದಿಕ್ಸೂಚಿಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ, ಚುನಾವಣೆಗೆ ಇನ್ನು ಕೇವಲ ೬ ದಿನಗಳು ಮಾತ್ರ ಇರುವುದರಿಂದ ಅಭ್ಯರ್ಥಿಯೇ ಎಲ್ಲಾ ಕಡೆ ಬಂದು ಪ್ರಚಾರ ಮಾಡಲು ಆಗದ ಕಾರಣ ಶಿಕ್ಷಕರು ಗೊಂದಲಗಳಿಗೆ ದಾರಿ ಮಾಡಿಕೊಡದೆ ಬೆಂಬಲಿಸಬೇಕು ಎಂದರಲ್ಲದೆ ಮುಂದೆ ಜಿಪಂ ತಾಪಂ ಚುನಾವಣೆ ಬರಲಿದೆ ಆ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿಯಾಗಬೇಕು, ವೈ.ಎ.ಎನ್ ಪರಿಷತ್ ನಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಅದನ್ನು ಮುಂದುವರೆಸಲು ಸಹಕಾರ ನೀಡಿ ಎಂದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಗ್ರಾಪಂ ಸದಸ್ಯರಾದ ಬಾಬು, ಪುಣ್ಯಮೂರ್ತಿ, ವೆಂಕಟೇಶ್, ಪುರುಷೋತ್ತಮಗೌಡ, ಅನ್ಬಳಗನ್, ಬೋಸ್ಲೇ ಇತರರು ಇದ್ದರು.