ಐಟಿ ದಾಳಿ ವೇಳೆ ಸಿಕ್ಕ ಅಕ್ರಮ ಹಣ ಕಾಂಗ್ರೆಸ್‌ದಲ್ಲ ಬಿಜೆಪಿಯದ್ದು-ಶಾಸಕ ಉದಯ್
1 Min read
Author : KannadaprabhaNewsNetwork
Published : Oct 17 2023, 12:45 AM IST
Share this Article
FB
TW
Linkdin
Whatsapp
16ಕೆಎಂಎನ್ ಡಿ12,13,14,15ಶ್ರೀರಂಗಪಟ್ಟಣ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳ ದಂಪತಿಗಳು ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು.ಸಾವಿರಾರು ಬೊಂಬೆಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.ಕೃಷ್ಣಭಟ್ ಮತ್ತು ಮಂಗಳ ದಂಪತಿ | Kannada Prabha
Image Credit: KP
ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿರುವ ಅಕ್ರಮ ಹಣ ಕಾಂಗ್ರೆಸ್‌ನದ್ದಲ್ಲ. ಅದು ಬಿಜೆಪಿಗೆ ಸೇರಿದ್ದಾಗಿದೆ. ಕಾಂಗ್ರೆಸ್‌ನವರಿಗೆ ಕೆಟ್ಟ ಹೆಸರು ತರಲು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ. ಉದಯ್ ಸೋಮವಾರ ಪ್ರತಿಕ್ರಿಯೆ ನೀಡಿದರು.
ಮದ್ದೂರು: ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿರುವ ಅಕ್ರಮ ಹಣ ಕಾಂಗ್ರೆಸ್‌ನದ್ದಲ್ಲ. ಅದು ಬಿಜೆಪಿಗೆ ಸೇರಿದ್ದಾಗಿದೆ. ಕಾಂಗ್ರೆಸ್‌ನವರಿಗೆ ಕೆಟ್ಟ ಹೆಸರು ತರಲು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ. ಉದಯ್ ಸೋಮವಾರ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿದೆ. ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಬಿಜೆಪಿ ನಾಯಕರು ಐಟಿ ದಾಳಿ ವೇಳೆ ಎಲ್ಲೇ ಹಣ ಸಿಕ್ಕಿದರೂ ಅದನ್ನು ಕಾಂಗ್ರೆಸ್ ನಾಯಕರ ತಲೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 4 ತಿಂಗಳಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಪಕ್ಷದ ಸಚಿವರುಗಳು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಕಮಿಷನ್ ಪಡೆಯುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಐ.ಟಿ.ದಾಳಿ ವೇಳೆ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಹಣ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿರುವ ಹಣವಿರಬಹುದು ಆಥವಾ ಬೇರೆ ವ್ಯವಹಾರದಲ್ಲಿ ಗಳಿಸಿರಬಹುದು. ಅದನ್ನು ಕಾಂಗ್ರೆಸ್ ಮುಖಂಡರ ಮೇಲೆ ಜನರನ್ನು ಎತ್ತಿ ಕಟ್ಟುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.