ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಮಹಿಳೆಯರಿಗಾಗಿ ಕರ್ನಾಟಕ ಮಾದರಿಯಲ್ಲಿ ‘ಅನ್ನಪೂರ್ಣ ಯೋಜನೆ’ಯನ್ನು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 28.25 ಲಕ್ಷ ಫಲಾನುಭವಿಗಳಿಗೆ ಮಾಸಿಕ 3,000 ರೂ. ನೆರವು ನೀಡುವುದಾಗಿ ಘೋಷಿಸಿದೆ.

ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಮಹಿಳೆಯರಿಗಾಗಿ ಕರ್ನಾಟಕ ಮಾದರಿಯಲ್ಲಿ ‘ಅನ್ನಪೂರ್ಣ ಯೋಜನೆ’ಯನ್ನು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 28.25 ಲಕ್ಷ ಫಲಾನುಭವಿಗಳಿಗೆ ಮಾಸಿಕ 3,000 ರೂ. ನೆರವು ನೀಡುವುದಾಗಿ ಘೋಷಿಸಿದೆ.

ಯೋಜನೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ಈ ಯೋಜನೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೊದಲ ಹಂತದಲ್ಲಿ 28,25,769 ಫಲಾನುಭವಿಗಳನ್ನು ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ . ಮುಂದಿನ 3 ತಿಂಗಳಲ್ಲಿ ಹೊಸ ಅರ್ಜಿದಾರರ ಪರಿಶೀಲನೆ ಮಾಡಿ ಮತ್ತಷ್ಟು ಮಹಿಳೆಯರಿಗೆ ಮುಂದಿನ ಹಂತದಲ್ಲಿ ಯೋಜನೆ ವಿಸ್ತರಿಸುತ್ತೇವೆ ಎಂದರು.

‘ಲಕ್ಷ್ಮಿ ಭಂಡಾರ್‌’ ಹೆಸರಿನ ಯೋಜನೆ ಹೊಂದಿತ್ತು

ಹಿಂದಿನ ಟಿಎಂಸಿ ಸರ್ಕಾರದ ‘ಲಕ್ಷ್ಮಿ ಭಂಡಾರ್‌’ ಹೆಸರಿನ ಯೋಜನೆ ಹೊಂದಿತ್ತು. ಇದರ ಅಡಿಯಲ್ಲಿ 2.42 ಕೋಟಿ ಫಲಾನುಭವಿಗಳು ತಿಂಗಳಿಗೆ ಗರಿಷ್ಠ 1,500 ರು. ಪಡೆಯುತ್ತಿದ್ದರು.