ಚುನಾವಣೆ ಮತ ಏಣಿಕೆ ಗೋಲ್‌ಮಾಲ್‌ ಪ್ರಕರಣ : ಇನ್ನೆರಡು ತಿಂಗಳಲ್ಲಿ ಮಾಜಿ ಶಾಸಕ ಹಾಲಿಯಾಗುವ ಸಂಭವ!

| Published : Sep 27 2024, 01:22 AM IST / Updated: Sep 27 2024, 04:18 AM IST

ಸಾರಾಂಶ

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಎಣಿಕೆ ಅಕ್ರಮ ಪ್ರಕರಣದ ತೀರ್ಪು ಇನ್ನೆರಡು ತಿಂಗಳಲ್ಲಿ ಬರಲಿದೆ ಎಂದು ಮಾಜಿ ಶಾಸಕ ಮಂಜುನಾಥ್ ಗೌಡ ತಿಳಿಸಿದ್ದಾರೆ. ಅವರು ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡುತ್ತಾ, ತಾಲೂಕಿನ ಜನರಿಗೆ ಶೀಘ್ರದಲ್ಲೇ 'ಶುಭ ಸುದ್ದಿ' ಸಿಗಲಿದೆ ಎಂದು ಹೇಳಿದರು.

 ಮಾಲೂರು : ವಿಧಾನಸಭೆಯ ಮಾಲೂರು ಕ್ಷೇತ್ರದ ಚುನಾವಣೆಯ ಮತ ಏಣಿಕೆಯಲ್ಲಿ ನಡೆದ ಗೋಲ್‌ಮಾಲ್‌ ಪ್ರಕರಣದ ಸಂಬಂಧ ಇನ್ನೆರಡು ತಿಂಗಳಲ್ಲಿ ನ್ಯಾಯಲಯದ ತೀರ್ಪು ಬರಲಿದ್ದು, ಕಾರ್ಯಕರ್ತರಿಗೆ ತಾಲೂಕಿನ ಜನತೆಗೆ ಶುಭ ಸುದ್ದಿ ಸಿಗಲಿದೆ. ಮಾಜಿಯನ್ನು ಹಾಲಿಯಾಗಿ ಕಾಣುವ ಅದೃಷ್ಠ ಸಿಗಲಿದೆ ಎಂದ ಮಾಜಿ ಶಾಸಕ ಮಂಜುನಾಥ್‌ ಗೌಡ ಹೇಳಿದರು.

ಅವರು ತಾಲೂಕಿನ ಮಡಿವಾಳ ಗ್ರಾಮದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕು ರಾಜಕಾರಣದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವ ಜಾಯಮಾನ ನನ್ನದಲ್ಲ. ನಾನು ದುಡ್ಡು ತಿನ್ನುವುದಿಲ್ಲ, ಇತರರನ್ನು ತಿನ್ನಲ್ಲು ಬಿಡುವುದಿಲ್ಲ ಎಂದರು.

30,000 ಸದಸ್ಯರ ನೋಂದಣಿ

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿದ್ದು, ಅವರ ಕೈ ಬಲ ಪಡಿಸಲು ತಾಲೂಕಿನಲ್ಲಿ ಮೊದಲ ಹಂತದಲ್ಲಿ ಮೂವತ್ತು ಸಾವಿರ ಹೊಸ ಕಾರ್ಯಕರ್ತರ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಹದಿನೈದು ಸಾವಿರ ದಾಟಿರುವ ನೂತನ ಸದಸ್ಯತ್ವದ ಸಂಖ್ಯೆ ಮೂವತ್ತು ಸಾವಿರ ಮುಟ್ಟಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅ‍ವರು ಹೇಳಿದರು.

ಬೂತ್‌ ಮಟ್ಟದಿಂದ ಸಂಘಟಿಸಿ

ಬಿಜೆಪಿ ಪಕ್ಷವು ಕಾರ್ಯಕರ್ತರ ಪಕ್ಷ. ಬೂತ್‌ ಮಟ್ಟದಿಂದಲೇ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಬೇಕು. ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನೀಡಿರುವ ನರೇಂದ್ರ ಮೋದಿ ಕೇವಲ ನಮ್ಮ ದೇಶ ಅಲ್ಲದೇ ಇಡೀ ಪ್ರಪಂಚಕ್ಕೆ ಶಕ್ತಿಯುತ ನಾಯಕರಾಗಿ ಹೊರಹೊಮ್ಮಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಭ್ರಷ್ಠಾಚಾರಕ್ಕೆ ಹೆಸರುವಾಸಿಯಾಗುತ್ತಿದೆ. ತಾವು ಮಾಡಿರುವ ತಪ್ಪು ಬೆಳಕಿಗೆ ಬಂದು ಕುತ್ತಿಗೆ ಮಟ್ಟಕ್ಕೆ ಬಂದಾಗ ಅಧಿಕಾರಿಗಳ ಮೇಲೆ ಹಾಕುತ್ತಿರುವ ಕಾಂಗ್ರೆಸ್‌ ಅನ್ನು ಜನರು ರಾಜ್ಯದಲ್ಲಿ ಬದಲಿಸುವ ದಿನ ದೂರ ಇಲ್ಲ ಎಂದರು.

ಅಲ್ಪ ಮತಗಳ ಅಂತರದಿಂದ ಸೋಲು

ಇಲ್ಲಿನ ಶಾಸಕರು ತಾಲೂಕಿನ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ಸಾರ್ವಜನಿಕರ ಕೆಲಸಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ಪಕ್ಷದ ಕಾರ್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಅಲ್ಪ ಮತದಲ್ಲಿ ಸೋಲಬೇಕಾಗಿತ್ತು ಎಂದರು.

ವಿಧಾನ ಪರಿಷತ್‌ ಸದಸ್ಯ ಗೋಪಿನಾಥ್‌ ರೆಡ್ಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್‌,ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ,ಪ್ರಧಾನ ಕರ‍್ಯರ‍್ಶಿ ತಬಲ ಎನ್.ಹೆಚ್.ರಾಜು,ತಾ.ಪಂ.ಮಾಜಿ ಸದಸ್ಯ ಎಸ್.ವಿ.ಲೋಕೇಶ್‌ ,ಉಪಾಧ್ಯಕ್ಷ ಮಡಿವಾಳ ಚಂದ್ರಶೇಖರ್‌ ಗೌಡ,ವೇಣುಗೋಪಾಲ್‌,ಗಾಂಧಿ ರ‍್ಕಲ್‌ ರಾಮಮರ‍್ತಿ,ಶ್ರವಣ್‌,ಭಾರತಮ್ಮ ನಂಜುಂಡಪ್ಪ,ಅನಿತಾ ನಾಗರಾಜು,ಶ್ರೀನಿವಾಸ್‌,ವೆಂಕಟೇಶ್‌, ಇನ್ನಿತರರು ಇದ್ದರು.