ಅಧಿಕಾರಕ್ಕೇರಿದ 3 ದಿನದಲ್ಲೇ ಪ್ರಧಾನಿ ಆಯ್ಕೆ: ಜೈರಾಂ ರಮೇಶ್

| Published : May 25 2024, 12:47 AM IST / Updated: May 25 2024, 04:29 AM IST

ಅಧಿಕಾರಕ್ಕೇರಿದ 3 ದಿನದಲ್ಲೇ ಪ್ರಧಾನಿ ಆಯ್ಕೆ: ಜೈರಾಂ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ 5 ಪ್ರಧಾನಿಯನ್ನು ನೋಡಬೇಕಾಗುತ್ತದೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಹೇಳಿಕೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿರುಗೇಟು ನೀಡಿದ್ದು,‘ ಫಲಿತಾಂಶ ಬಂದ 3 ದಿನದೊಳಗೆ ಪ್ರಧಾನಿ ಆಯ್ಕೆ ಆಗುತ್ತದೆ’ ಎಂದಿದ್ದಾರೆ.

ಚಂಡೀಗಢ: ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ 5 ಪ್ರಧಾನಿಯನ್ನು ನೋಡಬೇಕಾಗುತ್ತದೆ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಹೇಳಿಕೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿರುಗೇಟು ನೀಡಿದ್ದು,‘ ಫಲಿತಾಂಶ ಬಂದ 3 ದಿನದೊಳಗೆ ಪ್ರಧಾನಿ ಆಯ್ಕೆ ಆಗುತ್ತದೆ’ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈರಾಂ ರಮೇಶ್, ‘ಜೂನ್ 04 ಫಲಿತಾಂಶದಲ್ಲಿ ಇಂಡಿಯಾ ಕೂಟ ಸ್ಪಷ್ಟ ಬಹುಮತ ಪಡೆಯಲಿದೆ. ಅದಾದ ಮೂರು ದಿನದಲ್ಲಿಯೇ ಪ್ರಧಾನಿ ಹೆಸರನ್ನು ಘೋಷಿಸಲಾಗುತ್ತದೆ. ಈ ಬಾರಿ ಸ್ಪಷ್ಟ ಮತ್ತು ನಿರ್ಣಾಯಕ ಬಹುಮತವನ್ನು ಪಡೆಯುತ್ತೇವೆ. 20 ವರ್ಷಗಳ ಬಳಿಕ 2004ರ ಇತಿಹಾಸ ಮತ್ತೇ ಮರುಕಳಿಸುತ್ತದೆ. 

ಭಾರತ ಮತ್ತೆ ಪ್ರಕಾಶಿಸುತ್ತದೆ’ ಎಂದರು.ಇದೇ ವೇಳೆ, ಇಂಡಿಯಾ ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರೆಂದು ಪ್ರಶ್ನಿಸುವವರಿಗೆ ಜೈರಾಂ ರಮೇಶ್ ತಿರುಗೇಟು ನೀಡಿದ್ದು,‘2004ರಲ್ಲಿ ಮಿತ್ರ ಪಕ್ಷಗಳ ಜೊತೆ ಸೇರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಮೂರು ದಿನದಲ್ಲೇ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ಈ ಬಾರಿ ಅದಕ್ಕೆ ಮೂರು ದಿನವೂ ಆಗುವುದಿಲ್ಲ. ಯಾರು ಪ್ರಧಾನಿಯಾಗುತ್ತಾರೆ ಎಂದು ಕೇಳುವುದು ತಪ್ಪು ಪ್ರಶ್ನೆ. ಯಾವ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಸರಿಯಾದ ಪ್ರಶ್ನೆ.’ ಎಂದು ಹೇಳಿದ್ದಾರೆ.