ಸಾರಾಂಶ
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 103 ಶೌರ್ಯ ಪ್ರಶಸ್ತಿಗಳನ್ನುತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ.
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 103 ಶೌರ್ಯ ಪ್ರಶಸ್ತಿಗಳನ್ನುತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ. ಅವುಗಳಲ್ಲಿ ಮೂರು ಮರಣೋತ್ತರ ಸೇರಿದಂತೆ ನಾಲ್ಕು ಕೀರ್ತಿ ಚಕ್ರಗಳು, 4 ಮರಣೋತ್ತರ ಸೇರಿದಂತೆ 18 ಶೌರ್ಯ ಚಕ್ರಗಳು; 2 ಮರಣೋತ್ತರ ಸೇರಿದಂತೆ 63 ಸೇನಾ ಪದಕಗಳು; 11 ನೌಕಾ ಸೇನಾ ಪದಕ; ಮತ್ತು ಆರು ವಾಯು ಸೇನಾ ಪದಕಗಳು ಸೇರಿವೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಜಮ್ಮುವಿನ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದ ಭಾರತೀಯ ಸೇನೆ ಕರ್ನಲ್ ಮನ್‌ಪ್ರೀತ್ ಸಿಂಗ್, ರೈಫೆಲ್ ಮ್ಯಾನ್ ರವಿಕುಮಾರ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧೀಕ್ಷಕ ಹಿಮಯುನ್ ಮುಜ್ಜಮ್ಮಿಲ್ ಭಟ್ ಅವರಿಗೆ ಸರ್ಕಾರ ಮರಣೋತ್ತರವಾಗಿ ಕೀರ್ತಿ ಚಕ್ರ ಘೋಷಿಸಿದೆ. ಮೇ। ಎಂ. ನಾಯ್ಡು ಅವರಿಗೂ ಕೀರ್ತಿಚಕ್ರ ಬಂದಿದೆ.