ಕೆ.ಸಿ.ವ್ಯಾಲಿ ಕೊಳಚೆ ಎಂದವರು ಕಾವೇರಿ ತಂದ್ರಾ?

| Published : Apr 21 2024, 02:17 AM IST / Updated: Apr 21 2024, 06:36 AM IST

ಸಾರಾಂಶ

ತಮ್ಮ ತಲೆಯ ಮೇಲೆ ಬಂಡೆ ಹಾಕಿದಂತೆ ಕೋಲಾರ ಲೋಕಸಭಾ ಅಭ್ಯರ್ಥಿ ಕೆ.ವಿ. ಗೌತಮ್ ಅವರ ತಲೆಯ ಮೇಲೆ ಬಂಡೆ ಹಾಕಬೇಡಿ. ನನ್ನ ಹಾಗೆಯೇ ಅವರನ್ನೂ ಮೂಲೆಗುಂಪು ಮಾಡಬೇಡಿ ಎಂಬುದು ಮಾಡಿ ಸ್ಪೀಕರ್‌ ರಮೇಶ್‌ಕುಮಾರ್‌ ಮನವಿ

 ಶ್ರೀನಿವಾಸಪುರ :  ಮಳೆಯಿಲ್ಲದೆ ಬರಡಾಗಿದ್ದ ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರನ್ನು ಹರಿಸಿ ಸಸ್ಯಶಾಮಲ ಮಾಡುವ ಕನಸು ಹೊತ್ತು ಕೆಸಿ ವ್ಯಾಲಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸಿದರೆ ಜಾತಿ ರಾಜಕಾರಣದ ಹೆಸರಿನಲ್ಲಿ ನನ್ನನ್ನು ಸೋಲಿಸುತ್ತಿರಾ, ಮಳೆಯಿಲ್ಲದೆ ನೀರಿಲ್ಲದೆ ನಿಮ್ಮೂರಿನ ಕೆರೆಗಳು ಬತ್ತಿ ಹೋಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರ ತಾಲೂಕಿನಾದ್ಯಂತ ಪ್ರಚಾರ ಸಭೆಗಳನ್ನು ನಡೆಸಿ ರಾಯಲ್ಪಾಡು, ಲಕ್ಷ್ಮೀಪುರ ಗೌವನಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಂತ ಸಭೆಗಳಲ್ಲಿ ಮಾತನಾಡಿ, ನಾನು ನಿಮಗೆ ಮಾಡಿರುವಂತ ಅನ್ಯಾಯವಾದರೂ ಏನು ನನ್ನನ್ನು ಯಾವ ಕಾರಣಕ್ಕೆ ಸೋಲಿಸಿದಿರಿ ಶ್ರೀನಿವಾಸಪುರ ಎಂದರೆ ನಂಬಿಕೆಗೆ ಎತ್ತಿದ ಕೈ ಆಗಿತ್ತು ಇವತ್ತು ನಂಬಿಕೆ ದ್ರೋಹಕ್ಕೆ ಹೆಸರಾಯಿತ ಎಂದು ಆಕ್ರೋಶ ಭರಿತರಾಗಿ ನುಡಿದರು.

ಕಾಂಗ್ರೆಸ್ ನ್ಯಾಯ ಒದಗಿಸಿದೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದೆ, ಇದರಿಂದಾಗಿ ಮಹಿಳೆಯರು ಸ್ವಾಲಂಬಿಗಳಾಗಿದ್ದಾರೆ ಉಚಿತ ಪ್ರಯಾಣದ ಅನಕೂಲ ಪಡೆದು ರಾಜ್ಯಾದ್ಯಂತ ಇರುವಂತ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಹಾಗೆ ಆಸ್ಪತ್ರೆಗಳಿಗೆ ಮತ್ತು ಕೆಲಸ ಕಾರ್ಯಗಳಿಗೆ ಹೋಗುವ ಮಹಿಳೆಯರಿಗೆ ಅನುಕೂಲಗಿದೆ, ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ನೀಡುತ್ತಿದೆ.

ಶ್ರೀನಿವಾಸಪುರ ಕ್ಷೇತ್ರದ ಜನತೆ ನಂಬಿದ ಮುಖಂಡರ ಕೊಡುಗೆ ಏನು ಕಾಂಗ್ರೆಸ್ ಸರ್ಕಾರದ ಉಚಿತ ಪ್ರಯಾಣದ ಯೋಜನೆಯ ಫಲಾನುಭವಿ ಮಹಿಳೆಯರನ್ನು ಕೆವಲವಾಗಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಹಿಳೆಯರಿಗೆ ನೀಡುವ ಗೌರವವಾದರೂ ಏನು ಎಂದು ರಮೇಶ್ ಕುಮಾರ್ ಅವರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಗೌತಮ್‌ ಮೇಲೆ ಬಂಡೆ ಹಾಕಬೇಡಿ

ನನ್ನ ತಲೆಯ ಮೇಲೆ ಬಂಡೆ ಹಾಕಿದಂತೆ ಕೋಲಾರ ಲೋಕಸಭಾ ಅಭ್ಯರ್ಥಿ ಕೆ.ವಿ. ಗೌತಮ್ ಅವರ ತಲೆಯ ಮೇಲೆ ಬಂಡೆ ಹಾಕಬೇಡಿ. ನನ್ನ ಹಾಗೆಯೇ ಕೆ ವಿ ಗೌತಮ್ ರವರನ್ನು ಮೂಲೆಗುಂಪು ಮಾಡಬೇಡಿ. ನೀವು ಪಡೆಯುತ್ತಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿ ಇಂದಿರಾಗಾಂಧಿರವರ ಅಭಿಮಾನಿಗಳಾಗಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡಿ ಎಂದರು. ಜಿಪಂ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಲಕ್ಷ್ಮಿಪುರ ಗ್ರಾಪಂ ಅಧ್ಯಕ್ಷೆ ಮಂಗಮ್ಮ, ದಿಂಬಾಲ ಅಶೋಕ್, ತಾಪಂ ಮಾಜಿ ಸದಸ್ಯರಾದ ಕೆ.ಕೆ. ಮಂಜುನಾಥ್, ಉಪ್ಪರಪಲ್ಲಿ ತಿಮ್ಮಯ್ಯ, ವಕೀಲ ಮುನಿರಾಜು, ಬಾರ್ ಶಿವಾರೆಡ್ಡಿ, ಬೋರ್‌ವೆಲ್ ಕೃಷ್ಣಾರೆಡ್ಡಿ, ಎಂಡಿ ಅಪ್ಸರ್ ಇದ್ದರು.