12 ದಿನದಲ್ಲಿ ಕೇಜ್ರಿ ತೂಕ 4.5 ಕೆ.ಜಿ ಇಳಿಕೆ ಅತಿಷಿ ಆರೋಪ

| Published : Apr 04 2024, 01:03 AM IST / Updated: Apr 04 2024, 05:14 AM IST

12 ದಿನದಲ್ಲಿ ಕೇಜ್ರಿ ತೂಕ 4.5 ಕೆ.ಜಿ ಇಳಿಕೆ ಅತಿಷಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿತವಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ತೂಕ ಇಳಿಕೆಯಾಗಿದ್ದು, ಬಿಜೆಪಿಯವರು ಕೇಜ್ರಿವಾಲ್‌ ಅವರ ಆರೋಗ್ಯವನ್ನು ಅಪಾಯದಲ್ಲಿಟ್ಟಿದ್ದಾರೆ ಎಂದು ಎಎಪಿ ನಾಯಕಿ ಅತಿಷಿ ಬುಧವಾರ ಆರೋಪಿಸಿದರು.

ನವದೆಹಲಿ: ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಬಂಧಿತವಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ತೂಕ ಇಳಿಕೆಯಾಗಿದ್ದು, ಬಿಜೆಪಿಯವರು ಕೇಜ್ರಿವಾಲ್‌ ಅವರ ಆರೋಗ್ಯವನ್ನು ಅಪಾಯದಲ್ಲಿಟ್ಟಿದ್ದಾರೆ ಎಂದು ಎಎಪಿ ನಾಯಕಿ ಅತಿಷಿ ಬುಧವಾರ ಆರೋಪಿಸಿದರು.

ಈ ಬಗ್ಗೆ ತಮ್ಮ ಟ್ವೀಟರ್‌ ಖಾತೆಯಲ್ಲಿ ‘ಕೇಜ್ರಿವಾಲ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿ 12 ದಿನಗಳಾಗಿದ್ದು, ಅವರಲ್ಲಿ 4.5 ಕೆಜಿ ತೂಕ ಇಳಿಕೆಯಾಗಿದೆ. ಬಿಜೆಪಿಯವರು ಕೇಜ್ರಿವಾಲ್‌ ಅವರ ಆರೋಗ್ಯವನ್ನು ಅಪಾಯದಲ್ಲಿಟ್ಟಿದ್ದಾರೆ. ಕೇಜ್ರಿವಾಲ್‌ಗೆ ಏನಾದರು ಆದರೆ ದೇಶದ ಜನರೇ ಅಲ್ಲ, ಆ ದೇವರೂ ಅವರನ್ನು ಕ್ಷಮಿಸುವುದಿಲ್ಲ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಆರೋಪಕ್ಕೆ ತಿಹಾರ್‌ ಜೈಲಿನ ಅಧಿಕಾರಿಗಳು ಪ್ರತಿಕ್ರಿಯಿಸಿ ಕೇಜ್ರಿವಾಲ್‌ ಆರೋಗ್ಯ ಸ್ಥಿರವಾಗಿದೆ. ನಮ್ಮ ವಶಕ್ಕೆ ಬಂದ ದಿನದಿಂದಲೂ 65 ಕೆಜಿಯಲ್ಲೇ ಮುಂದುವರೆದಿದೆ ಎಂದು ತಿಳಿಸಿದ್ದಾರೆ.