ಜೈಲಿಂದಲೇ ದಿಲ್ಲಿಗೆ 6 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್‌!

| Published : Apr 01 2024, 12:55 AM IST / Updated: Apr 01 2024, 04:27 AM IST

Arvind Kejrival

ಸಾರಾಂಶ

ದೆಹಲಿ ಲಿಕ್ಕರ್‌ ಹಗರಣದಲ್ಲಿ ಜೈಲುಪಾಲಾದ ಬಳಿಕವೂ ಅಲ್ಲಿಂದಲೇ ಸರ್ಕಾರಿ ಆದೇಶ ಹೊರಡಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಇದೀಗ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ 6 ಗ್ಯಾರಂಟಿಗಳನ್ನೂ ಜೈಲಿಂದಲೇ ಘೋಷಿಸಿದ್ದಾರೆ.

ನವದೆಹಲಿ: ದೆಹಲಿ ಲಿಕ್ಕರ್‌ ಹಗರಣದಲ್ಲಿ ಜೈಲುಪಾಲಾದ ಬಳಿಕವೂ ಅಲ್ಲಿಂದಲೇ ಸರ್ಕಾರಿ ಆದೇಶ ಹೊರಡಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಇದೀಗ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ 6 ಗ್ಯಾರಂಟಿಗಳನ್ನೂ ಜೈಲಿಂದಲೇ ಘೋಷಿಸಿದ್ದಾರೆ.

ಕೇಜ್ರಿವಾಲ್‌ ಅವರು ಈ ಸಂಬಂಧ ನೀಡಿರುವ ಭರವಸೆಗಳನ್ನು ಅವರ ಪತ್ನಿ ಸುನಿತಾ, ಭಾನುವಾರ ಇಲ್ಲಿ ಆಯೋಜನೆಗೊಂಡಿದ್ದ ಇಂಡಿಯಾ ಕೂಟದ ಸಮಾವೇಶದಲ್ಲಿ ಘೋಷಿಸಿದರು.ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ, ದೇಶದ ಎಲ್ಲರಿಗೂ ಉಚಿತ ಆರೋಗ್ಯ ಸೇವೆ- ಇವು ಕೇಜ್ರಿವಾಲ್‌ ಅವರ ಕೆಲವು ಪ್ರಮುಖ ಉದ್ದೇಶಗಳಾಗಿವೆ ಎಂದು ಸುನಿತಾ ಹೇಳಿದರು ಹಾಗೂ ಕೇಜ್ರಿವಾಲ್‌ ಜೈಲಿಂದಲೇ ನೀಡಿದ ಸಂದೇಶ ಓದಿದರು.

6 ಗ್ಯಾರಂಟಿಗಳು:

1. ಇಡೀ ದೇಶದಾದ್ಯಂತ 24 ಗಂಟೆ ವಿದ್ಯುತ್

2. ದೇಶದಾದ್ಯಂತ ಬಡವರಿಗೆ ಉಚಿತ ವಿದ್ಯುತ್

3. ಪ್ರತಿ ಗ್ರಾಮ, ನೆರೆಹೊರೆಯಲ್ಲಿ ಅತ್ಯುತ್ತಮ ಸರ್ಕಾರಿ ಶಾಲೆ

4. ಪ್ರತಿ ಗ್ರಾಮ, ನೆರೆಹೊರೆಯಲ್ಲಿ ಮೊಹಲ್ಲಾ ಕ್ಲಿನಿಕ್‌ ಸ್ಥಾಪನೆ

5. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ

6. ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ