‘ಶೈಲಜಾ ಅಶ್ಲೀಲ ವಿಡಿಯೋ ಯಾರು ಮಾಡ್ತಾರೆ, ಮಂಜುವಾರಿಯರ್‌ ಅಂದ್ರೆ ನಂಬಬಹುದು’

| Published : May 13 2024, 01:02 AM IST / Updated: May 13 2024, 04:25 AM IST

board 10th result via mobile SMS
‘ಶೈಲಜಾ ಅಶ್ಲೀಲ ವಿಡಿಯೋ ಯಾರು ಮಾಡ್ತಾರೆ, ಮಂಜುವಾರಿಯರ್‌ ಅಂದ್ರೆ ನಂಬಬಹುದು’
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ವಡಕ್ಕರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಕೆ.ಕೆ.ಶೈಲಜಾ ಅವರ ತಿರುಚಿದ ಅಶ್ಲೀಲ ವಿಡಿಯೋ ಸುಳ್ಳೆಂದು ಹೇಳುವ ಭರದಲ್ಲಿ ಯುಡಿಪಿ ನಾಯಕ ಹರಿಹರನ್‌ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ.

ತಿರುವನಂತಪುರ: ಕೇರಳದ ವಡಕ್ಕರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಕೆ.ಕೆ.ಶೈಲಜಾ ಅವರ ತಿರುಚಿದ ಅಶ್ಲೀಲ ವಿಡಿಯೋ ಸುಳ್ಳೆಂದು ಹೇಳುವ ಭರದಲ್ಲಿ ಯುಡಿಪಿ ನಾಯಕ ಹರಿಹರನ್‌ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರಿಹರನ್‌ ಅವರು, ‘ಯಾರಾದರೂ ಶಿಕ್ಷಕಿ (ಕೇರಳದ ಮಾಜಿ ಸಚಿವೆ ಕೆ.ಕೆ.ಶೈಲಜಾ )ಯರ ಆಶ್ಲೀಲ ವಿಡಿಯೋವನ್ನು ಮಾಡುತ್ತಾರೆಯೇ? ನಟಿ ಮಂಜು ವಾರಿಯರ್‌ ಅಂತವರ ಆಶ್ಲೀಲ ವಿಡಿಯೋ ಮಾಡಿದ್ದಾರೆ ಎಂದರೆ ಒಪ್ಪಬಹುದು. ಎಡಪಂಥೀಯರು ಮತದಾರರನ್ನು ಸೆಳೆಯಲು ಮತ್ತು ಅವರಿಂದ ಸಹಾನೂಭೂತಿ ಗಿಟ್ಟಿಸಿಕೊಳ್ಳಲು ಈ ತರ ನಕಲಿ ವಿಡಿಯೋಗಳನ್ನು ತಾವೇ ಸೃಷ್ಟಿ ಮಾಡಿ ಪ್ರಸಾರ ಮಾಡುತ್ತಾರೆ’ ಎಂದು ಹೇಳಿದ್ದಾರರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಹರಿಹರನ್‌ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.