ಸಾರಾಂಶ
ನ್ಯಾಷನಲ್ ಹೆರಾಲ್ಡ್‌ನ 752 ಕೋಟಿ ರು. ಆಸ್ತಿಪಾಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ನಿರ್ಧರಿಸಿದ್ದರೂ ನಾವು ಹೆದರುವುದಿಲ್ಲ. ನಾವು ಎದುರಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ಹೈದರಾಬಾದ್: ನ್ಯಾಷನಲ್ ಹೆರಾಲ್ಡ್‌ನ 752 ಕೋಟಿ ರು. ಆಸ್ತಿಪಾಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ನಿರ್ಧರಿಸಿದ್ದರೂ ನಾವು ಹೆದರುವುದಿಲ್ಲ. ನಾವು ಎದುರಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ತೆಲಂಗಾಣದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು,‘ಬಿಜೆಪಿ ಇ.ಡಿ. ಮೂಲಕ ನೆಹರು ಸ್ಥಾಪಿತ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ದಾಳಿ ನಡೆಸಿ ಅದನ್ನು ಮುಚ್ಚಲು ಯತ್ನಿಸುತ್ತಿದೆ. ಸ್ವಾತಂತ್ರ್ಯದ ವೇಳೆ ಜನರಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸಲು ಮೊದಲ ಪ್ರಧಾನಿ ಪಂಡಿತ್ ನೆಹರು ಇದನ್ನು ಸ್ಥಾಪಿಸಿದ್ದರು. ಈ ದಾಳಿಯಿಂದ ಕಾಂಗ್ರೆಸ್ ಹೆದರುತ್ತದೆ ಎಂದು ಅಂದುಕೊಂಡರೆ ಅದು ಸುಳ್ಳು. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಪಕ್ಷವಾಗಿದ್ದು, ಇದನ್ನು ಎದುರಿಸುತ್ತೇವೆ’ ಎಂದರು.