ಅನಾರೋಗ್ಯ ಕಾರಣ ಬಿಜೆಪಿ ಪರ ಪ್ರಚಾರಕ್ಕೆ ಬರಲ್ಲ ನಟಿ ಖುಷ್ಬೂ

| Published : Apr 08 2024, 01:04 AM IST / Updated: Apr 08 2024, 05:00 AM IST

ಸಾರಾಂಶ

ನಟಿ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಯ ತಾರಾ ಪ್ರಚಾರಕಿಯಾಗಿರುವ ಖುಷ್ಬೂ ಸುಂದರ್‌ ತಮಗೆ ಅನಾರೋಗ್ಯವುಂಟಾದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಗೈರಾಗುವುದಾಗಿ ತಿಳಿಸಿದ್ದಾರೆ.

ಚೆನ್ನೈ: ನಟಿ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಯ ತಾರಾ ಪ್ರಚಾರಕಿಯಾಗಿರುವ ಖುಷ್ಬೂ ಸುಂದರ್‌ ತಮಗೆ ಅನಾರೋಗ್ಯವುಂಟಾದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಗೈರಾಗುವುದಾಗಿ ತಿಳಿಸಿದ್ದಾರೆ.

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಪತ್ರ ಬರೆದಿದ್ದು, ‘ನನಗೆ 2019ರಲ್ಲಿ ಮೂಳೆ ಮುರಿದಿದ್ದು, ಕಳೆದ ಐದು ವರ್ಷಗಳಿಂದಲೂ ಆ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಅದರೆ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಪ್ರಯಾಣ, ಕುಳಿತಿರುವಿಕೆ ಅತ್ಯಗತ್ಯ ಆಗಿರುವುದರಿಂದ ಮತ್ತೆ ನನಗೆ ಮೂಳೆ ಮುರಿತ ಬಾಧಿಸಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಅಲ್ಪ ವಿರಾಮ ಘೋಷಿಸುತ್ತಿದ್ದೇನೆ’ ಎಂದು ವಿನಂತಿಸಿದ್ದಾರೆ.

ಖುಷ್ಬೂ ಕೇವಲ ಬಾಲಿವುಡ್‌ ಅಲ್ಲದೆ ಕನ್ನಡ, ತಮಿಳು ಮುಂತಾದ ಭಾಷೆಗಳಲ್ಲೂ ನಟಿಸಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.