ಇತಿಹಾಸವುಳ್ಳ ಕಾಂಗ್ರೆಸ್‌ನಲ್ಲಿ ಸಂಘಟನೆಯ ಕೊರತೆ : ಲೋಕಸಭಾ ಮಾಜಿ ಸದಸ್ಯ ವಿನಯ್‌ಕುಮಾರ್ ಸೊರಕೆ

| Published : Sep 05 2024, 12:33 AM IST / Updated: Sep 05 2024, 03:38 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಇದ್ದಿದ್ದರೆ ಗೆಲುವು ಸಾಧ್ಯವಿತ್ತು ಎಂದು ಮಾಜಿ ಸಂಸದ ವಿನಯ್‌ಕುಮಾರ್ ಸೊರಕೆ ಅಭಿಪ್ರಾಯಪಟ್ಟರು. ಪಕ್ಷದಲ್ಲಿನ ಒಗ್ಗಟ್ಟು ಮತ್ತು ಸಂಘಟನೆಯ ಕೊರತೆಯಿಂದ ಸೋಲುಂಟಾಗಿದೆ ಎಂದು ಅವರು ಹೇಳಿದರು.

 ಕೋಲಾರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಇತಿಹಾಸವುಳ್ಳ ಪಕ್ಷವಾಗಿದೆ, ಕಾಂಗ್ರೆಸ್‌ ಒಗ್ಗಟ್ಟಿನಿಂದ ಸಂಘಟನೆಯಾದಲ್ಲಿ ಯಾವುದೇ ಚುನಾವಣೆಗಳನ್ನು ಗೆಲ್ಲಬಹುದಾದ ಶಕ್ತಿ ಇದೆ ಎಂದು ಲೋಕಸಭಾ ಮಾಜಿ ಸದಸ್ಯ ವಿನಯ್‌ಕುಮಾರ್ ಸೊರಕೆ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದ್ದರೆ ಲೋಕಸಭಾ ಸ್ಥಾನ ಗೆಲ್ಲಬಹುದಿತ್ತು ಎಂದರು.ಒಗ್ಗಟ್ಟು, ಸಂಘಟನೆ ಕೊರತೆ

ಜಿಲ್ಲೆಯ ೬ ವಿಧಾನ ಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದರೂ ಸಹ ಲೋಕಸಭಾ ಅಭ್ಯರ್ಥಿಗೆ ಸೋಲುಂಟಾಗಲು ಕಾರಣ ನಮ್ಮಲ್ಲಿ ಒಗ್ಗಟ್ಟು ಮತ್ತು ಸಂಘಟನೆಗಳ ಕೊರತೆಯಿಂದಾಗಿ ಎನ್.ಡಿ.ಎ ಮೈತ್ರಿ ಪಕ್ಷವು ಇದರ ಲಾಭ ಪಡೆದು ಆಯ್ಕೆಯಾಗಿ, ನಮಗೆ ಸೋಲುಂಟಾಗಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಸತ್ಯಶೋಧನಾ ಸಮಿತಿಯಲ್ಲಿ5 ಮಂದಿಯ ಸದಸ್ಯರು ಇದ್ದು ೯ ಕ್ಷೇತ್ರಗಳಿಗೆ ಭೇಟಿ ನೀಡಿ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಎ.ಐ.ಸಿ.ಸಿ. ಮತ್ತು ಕೆ.ಪಿ.ಸಿ.ಸಿ.ಗೆ ವರದಿ ಸಲ್ಲಿಸಬೇಕಾಗಿದೆ. ಹಾಗಾಗಿ ಪ್ರತಿ ಕ್ಷೇತ್ರದಲ್ಲಿನ ಕಾಂಗ್ರೆಸ್ ಮುಖಂಡರ, ಪದಾಧಿಕಾರಿಗಳ ವೈಯುಕ್ತಿಕ ಅಭಿಪ್ರಾಯ ಪ್ರತ್ಯೇಕವಾಗಿ ಪಡೆಯಲಾಗುವುದು ಎಂದರು.

ಸಮಸ್ಯೆ ಪರಿಹರಿಸಲು ಯತ್ನ

ಪಕ್ಷದ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಏನಾದರೂ ವ್ಯತ್ಯಾಸಗಳು, ಭಿನ್ನಾಭಿಪ್ರಾಯ ಸಮಸ್ಯೆಗಳಿದ್ದಲ್ಲಿ ಮತ್ತೊಮ್ಮೆ ಸಮಿತಿಯ ತಂಡವು ಕ್ಷೇತ್ರಕ್ಕೆ ಭೇಟಿ ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಜೊತೆಗೆ ಪಕ್ಷದ ಸಂಘಟನೆಗೆ ಒತ್ತು ಕೊಡುವ ಜವಾಬ್ದಾರಿ ಸಮಿತಿಯ ಮೇಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಸತ್ಯಶೋಧನ ಸಮಿತಿ ಸದಸ್ಯರಾದ ಧರ್ಮಸೇನಾ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷರಾದ ಪ್ರಸಾದಬಾಬು, ಉದಯಶಂಕರ್, ಎಸ್.ಸಿ.ಘಟಕದ ಅಧ್ಯಕ್ಷ ಜಯದೇವ್, ಹಿಂದುಳಿದ ವರ್ಗದ ಮುಖಂಡ ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಸಿ.ಸೋಮಶೇಖರ್, ರಾಮಯ್ಯ, ವೆಂಕಟಪತ್ಯೇಪ್ಪ, ಖಾದ್ರಿಪುರ ಬಾಬು, ಶಿವಕುಮಾರ್, ಸಾಧಿಕ್‌ ಪಾಷ ಇದ್ದರು.