ಸಾರಾಂಶ
ಸಂಸತ್ತಿನಲ್ಲಿ ನಡೆದ ಸ್ಮೋಕ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿರುವ ಪಶ್ಚಿಮ ಬಂಗಾಳದ ಕೋಲ್ಕತಾ ನಿವಾಸಿ ಲಲಿತ್ ಮೋಹನ್ ಝಾ, ಟಿಎಂಸಿ ಶಾಸಕ ತಪಸ್ ರಾಯ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳನ್ನು ಬಿಜೆಪಿ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಟಿಎಂಸಿ ಶಾಸಕನೊಂದಿಗೆ ಝಾ ಇರುವ ಫೋಟೋ ಹರಿಬಿಟ್ಟ ಬಿಜೆಪಿ
ನವದೆಹಲಿ: ಸಂಸತ್ತಿನಲ್ಲಿ ನಡೆದ ಸ್ಮೋಕ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿರುವ ಪಶ್ಚಿಮ ಬಂಗಾಳದ ಕೋಲ್ಕತಾ ನಿವಾಸಿ ಲಲಿತ್ ಮೋಹನ್ ಝಾ, ಟಿಎಂಸಿ ಶಾಸಕ ತಪಸ್ ರಾಯ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳನ್ನು ಬಿಜೆಪಿ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಇದು ಉಭಯ ಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.ಫೋಟೋಗಳನ್ನು ಟ್ವೀಟ್ ಮಾಡಿರುವ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ‘ಝಾ ಮತ್ತು ತಪಸ್ ಬಹಳ ಸಮಯದಿಂದಲೂ ಸಂಪರ್ಕದಲ್ಲಿದ್ದು, ದಾಳಿಗೆ ಇವರ ಸಹಕಾರ ಇದೆ ಎಂಬುದಕ್ಕೆ ತನಿಖೆ ನಡೆಸಲು ಸಾಕ್ಷಿ ಸಾಕಲ್ಲವೇ’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಶಾಸಕ ರಾಯ್ ‘ಫೋಟೋ ಮೂಲಕ ನೀವು ಏನು ಸಾಬೀತುಪಡಿಸಬಹುದು? ನನಗೆ ದುಷ್ಕರ್ಮಿ ಯಾರೆಂದು ತಿಳಿದಿಲ್ಲ. ಅವನ ಹೆಸರಾಗಲೀ ಮುಖವಾಗಲೀ ಪರಿಚಯವಿಲ್ಲ. ಬಿಜೆಪಿ ಸಂಸದ ಹಾಗೂ ರಾಜ್ಯಾಧ್ಯಕ್ಷರು ಪ್ರಬುದ್ಧರಾಗಿರಬೇಕು. ಇದು ಬಾಲಿಶ ವರ್ತನೆಯಾಗಿದೆ’ ಎಂದಿದ್ದಾರೆ.
2020 ರ ಸರಸ್ವತಿ ಪೂಜೆಯಲ್ಲಿ ಶಾಸಕ ತಪಸ್‌ರೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಝಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ. ಇವು ಈಗ ವೈರಲ್ ಆಗಿವೆ.;Resize=(128,128))
;Resize=(128,128))
;Resize=(128,128))