ಸಾರಾಂಶ
ರೈತರ ಹಾಗೂ ದೇವಾಲಯಗಳ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್ ಕುಮ್ಮಕ್ಕು ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು.
ಬಂಗಾರಪೇಟೆ : ರೈತರ ಹಾಗೂ ದೇವಾಲಯಗಳ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್ ಕುಮ್ಮಕ್ಕು ನೀಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು.
ಈವೇಳೆ ಮಾತನಾಡಿದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ರೈತರ, ಮಠ ಮಾನ್ಯಗಳ ಆಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿಯ ನೀತಿಯನ್ನು ಖಂಡಿಸುವುದಕ್ಕಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ 'ನಮ್ಮ ಭೂಮಿ, ನಮ್ಮ ಹಕ್ಕು''' ಪ್ರತಿಭಟನೆಯ ಅಂಗವಾಗಿ ಪಟ್ಟಣದಲ್ಲಿಯೂ ಸಹ ಪಕ್ಷದ ವತಿಯಿಂದ ವಕ್ಫ್ ಮಂಡಳಿಯ ನಿರಂಕುಶ ಅಧಿಕಾರ ಹಾಗೂ ಭೂ ಕಬಳಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ 600 ಎಕರೆ ವಕ್ಫ್‌ಗೆ
ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಸೂಚನೆಯ ಮೇರೆಗೆ ಕೋಲಾರದಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ಕೃಷಿ ಜಮೀನನನ್ನು ವಕ್ಫ್ ಆಸ್ತಿಯೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷಾ ಅವರು ಸುಮಾರು 600 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಕ್ಫ್ ಎಂದು ಘೋಷಿಸಿ ಅನ್ನದಾತರಿಗೆ, ಭೂಮಾಲೀಕರಿಗೆ ಅನ್ಯಾಯವೆಸಗಿದ್ದಾರೆಂದು ಆರೋಪಿಸಿದರು.
ವಿಜಯೇಂದ್ರ ನಾಯಕತ್ವ
ವಿಜಯೇಂದ್ರರವರ ನಾಯಕತ್ವವನ್ನು ಪಕ್ಷದ ಎಲ್ಲಾ ನಾಯಕರು ಒಪ್ಪಿಕೊಂಡಿದ್ದು,ಬಿಜೆಪಿಯ ಪಕ್ಷದ ಬಹುತೇಕ ನಾಯಕರು ಮತ್ತು ಮುಖಂಡರು ಅವರ ಪರವಾಗಿದ್ದು ,ಮುಂದೆ ಬರುವ ಚುನಾವಣೆಗಳನ್ನು ಅವರ ನಾಯಕತ್ವದಲ್ಲೇ ಎದುರಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದಾಗಿ ಹಾಗು ವಿಜಯೇಂದ್ರ ಪರವಾಗಿ ನಿಲ್ಲುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ತಾಲೂಕು ಮಂಡಲ ಅಧ್ಯಕ್ಷ ಸಂಪಂಗರೆಡ್ಡಿ, ನಗರ ಅಧ್ಯಕ್ಷ ಬಿ.ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿಯಾದ ಹೆಚ್ ಆರ್ ಶ್ರೀನಿವಾಸ್, ಬಲಮಂದೆ ಮಂಜುನಾಥ್, ಮಾರ್ಕಂಡೇಗೌಡ, ಹನುಮಪ್ಪ, ತಿಪ್ಪಾರೆಡ್ಡಿ, ಸೀತಾರಾಮಪ್ಪ, ಮಹದೇವ್,ಹುನುಕ್ಕಂದ ವೆಂಕಟೇಶಪ್ಪ, ಪಾರ್ಥಸಾರಥಿ ಮತ್ತಿತರರು ಇದ್ದರು.