ಭಿನ್ನಾಭಿಪ್ರಾಯ ಬಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

| Published : Apr 21 2024, 02:29 AM IST / Updated: Apr 21 2024, 04:22 AM IST

ಭಿನ್ನಾಭಿಪ್ರಾಯ ಬಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಪಕ್ಷವು ನುಡಿದಂತೆ ನಡೆವ ಪಕ್ಷವಾಗಿದೆ, 5 ಗ್ಯಾರಂಟಿಗಳು ಈಡೇರಿಸಿದ ಮಾದರಿಯಲ್ಲಿಯೇ ಮುಂದೆಯೂ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ 25 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದೆ

  ಕೋಲಾರ : ಚುನಾವಣೆಯ ಸಮಯದಲ್ಲಿ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು ಎದುರಾಗುವುದು ಸಹಜ, ಆದರೆ ಸಣ್ಣ ಪುಟ್ಟ ವಿಚಾರಕ್ಕೆ ಚುನಾವಣೆ ಸಮಯದಲ್ಲಿ ಮುಂದುವರೆಸಿಕೊಂಡು ಹೋಗುವುದು ಸರಿಯಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಹೇಳಿದರು.

ತಾಲೂಕಿನ ಕುಂಬಾರಹಳ್ಳಿಯ ಆರಾಧ್ಯ ಹೋಟಲ್‌ನಲ್ಲಿ ಲೋಕಸಭೆ ಚುನಾವಣೆ ಸಂಬಂಧ ಶನಿವಾರ ನಡೆದ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಎಂದರೆ ಒಂದೇ ಕುಟುಂಬ ಇದ್ದಹಾಗೆ, ಕಾರ್ಯಕರ್ತರು, ಮುಖಂಡರು ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಸಂಘಟನೆಯ ಶಕ್ತಿ ಹೆಚ್ಚುತ್ತದೆ ಎಂದರು.

ಅಧಿಕಾರಕ್ಕೆ ಬಂದರೆ ಗ್ಯಾರಂಟಿ

ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ೫ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು, ಜನತೆಯು ಸಹ ಅಶೀರ್ವಾದಿಸಿ ಬಹುಮತ ನೀಡಿದ್ದಾರೆ. ಇದೀಗ ಲೋಕಸಭಾ ಚುನಾವಣೆಯು ನಮ್ಮ ಮುಂದಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ೫ ನ್ಯಾಯ ಗ್ಯಾರಂಟಿಗಳನ್ನು ಪ್ರನಾಳಿಕೆಯಲ್ಲಿ ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಮೇಲೆ ನಂಬಿಕೆಯಿಟ್ಟಿರುವ ಜನ ಲೋಕಸಭಾ ಚುನಾವಣೆಯಲ್ಲೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ೨೫ ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದೆ, ಕಾಂಗ್ರೆಸ್‌ ಪಕ್ಷವು ನುಡಿದಂತೆ ನಡೆವ ಪಕ್ಷವಾಗಿದೆ, 5 ಗ್ಯಾರಂಟಿಗಳು ಈಡೇರಿಸಿದ ಮಾದರಿಯಲ್ಲಿಯೇ ಮುಂದೆಯೋ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ೨೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಇದೇ ರೀತಿ ಚುನಾವಣೆಗೆ ಮುನ್ನ ಭರವಸೆ ನೀಡಿದಾಗ ವಿರೋಧ ಪಕ್ಷಗಳು ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸುತ್ತಿದ್ದಕ್ಕೆ ಪಂಚ ಖಾತ್ರಿ ಯೋಜನೆಗಳು ಪರಿಪೂರ್ಣವಾಗಿ ಅನುಷ್ಟಾನಗೊಳಿಸಿ ಯಶಸ್ವಿಯಾಗಿರುವುದಕ್ಕೆ ವಿರೋಧ ಪಕ್ಷಗಳಿಗೆ ಮುಖ ಭಂಗವಾಗಿದೆ ಎಂದು ಟೀಕಿಸಿದರು. 

₹187 ಸಾವಿರ ಲಕ್ಷ ಕೋಟಿ ಸಾಲ

ಭಾರತ ವಿಕಾಸ ಎಂಬ ಘೋಷಣೆಯೂ ಭಾರತದ ಸಾಲ ಕಾಂಗ್ರೆಸ್ ಪಕ್ಷದ ಆಡಳಿತ ನಡೆಸಿದ ಸುಮಾರು 50 ವರ್ಷಗಳ ಕಾಲದ ಆಡಳಿತದಲ್ಲಿ ವಿಶ್ವಸಂಸ್ಥೆಯಲ್ಲಿ ಮಾಡಿರುವ ಸಾಲವು 54 ಸಾವಿರ ಲಕ್ಷ ಕೋಟಿ ರೂ.ಗಳು ಇತ್ತು. ಈಗಾ ಕೇವಲ ೧೦ ವರ್ಷದಲ್ಲಿಯೇ ೧೮೭ ಸಾವಿರ ಲಕ್ಷ ಕೋಟಿ ರೂ ಸಾಲ ಏರಿಕೆ ಮಾಡಿರುವುದು ಕಂಡರೆ ಸಾಲ ಮಾಡಿ ತುಪ್ಪ ತಿಂದಂತೆ ಅಗಿದೆ ಎಂದು ಟೀಕಿಸಿದರು.

ಕೆಲವರು ಅಧಿಕಾರಕ್ಕಾಗಿ ಪಕ್ಷವನ್ನು ಬದಲಾಯಿಸಿದ್ದಾರೆ, ಭೈರತಿ ಬಸವರಾಜ್ ಅವರು ೧೦ ತಿಂಗಳ ಕಾಲ ಅಜ್ಞಾನತ ವಾಸದಲ್ಲಿದ್ದದ್ದು ಏಕೆ ಎಂದು ಪ್ರಶ್ನಿಸಿದರು, ಕೋವಿಡ್ ಸಂದರ್ಭದಲ್ಲಿ ಮಾಡಿರುವ ವ್ಯಾಪಕ ಭ್ರಷ್ಟಾಚಾರವು ಹೇಸಿಗೆ ತರುವಂತೆ ಇದೆ, ಕೋವಿಡ್ ಸಂತ್ರಸ್ತರ ಶಾಪ ತಟ್ಟದೆ ಇರದು, ಕೋವಿಡ್ ಸಂದರ್ಭದಲ್ಲಿನ ಔಷಧಿಗಳು ಹಾಗೂ ಪರಿಕರಗಳ ಖರೀದಿಯಲ್ಲಿ ನಡೆಸಿರುವ ಹಗರಣವನ್ನು ತನಿಖೆ ನಡೆಸುವ ಮೂಲಕ ಬಿಜೆಪಿ ಭ್ರಷ್ಟಾಚಾರ ಬಹಿರಂಗಪಡಿಸಬೇಕಾಗಿದೆ ಎಂದರು.ಎಲ್ಲ ಸ್ಥಾನ ಕಾಂಗ್ರೆಸ್‌ ಗೆಲ್ಲಲಿದೆ

ಈ ಚುನಾವಣೆಯಲ್ಲಿ ರಾಜ್ಯದ ೨೮ ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರು ಮೈತ್ರಿ ಅಭ್ಯರ್ಥಿಗಿಂತ ಅಧಿಕ ಮತಗಳನ್ನು ಪಡೆದು ವಿಜೇತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಮಾಧ್ಯಮದ ಸಂಯೋಜಕ ದಯನಂದ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್ ಇದ್ದರು.