ಸಾರಾಂಶ
ಚಿಕ್ಕಬಳ್ಳಾಪುರ : ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜೀನಾಮೆ ನೀಡಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಚಲವಾದಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ತ್ಯಾಗರಾಜ್.ಪಿ.ಚಲವಾದಿ ಆಗ್ರಹಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ರಾಜ್ಯ ಚಲವಾದಿ ಕ್ಷೇಮಾಭಿವೃದ್ದಿ ಜಿಲ್ಲಾ ಸಂಘದಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಭಾರತ ರತ್ನಡಾ. ಬಿ. ಆರ್.ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಭವನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಡಾಅಂಬೇಡ್ಕರ್ ಅನುಯಾಯಿಗಳಿಗೆ ಅವಮಾನ ಮಾಡಿದ್ದಾರೆ ಎಂದರು.
ಮನುವಾದಿ ಬಿಜೆಪಿ, ಆರೆಸ್ಸೆಸ್
ಮನುವಾದವನ್ನು ಮೈಗೂಡಿಸಿಕೊಂಡಿರುವ ಆರೆಸ್ಸೆಸ್ ಹಾಗೂ ಬಿಜೆಪಿ ಎಂದೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಅನೇಕ ಬಾರಿ ಹೇಳಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅಮಿತ್ ಶಾ ಅವರ ಬಾಯಲ್ಲಿ ಇಂತಹ ಮಾತುಗಳು ಬಂದಿವೆ ಎಂದು ಟೀಕಿಸಿದರು.
ಅಂಬೇಡ್ಕರ್ ಹೆಸರು ಹೇಳಲೂ ನಿಮಗೆ ಅವಮಾನ ಆಗುವುದಾದರೆ ನೀವು ಈದೇಶವನ್ನು ಬಿಟ್ಟು ತೊಲಗಿ, ಅಂಬೇಡ್ಕರ್ ಪಡೆದ ಶಿಕ್ಷಣದ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲದ ಮನುವಾದಿ ಸಂತಾನ ನೀವು. ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ. ದೇಶದ ಎಲ್ಲ ನಿವಾಸಿಗಳಿಗೆ ಸಂವಿಧಾನ ನೀಡಿ ಅನುಕೂಲ ಮಾಡಿದ್ದಾರೆ ಎಂದರು.
ಶಾರನ್ನು ಸಂಪುಟದಿಂದ ಕೈಬಿಡಲಿ
ಪ್ರಧಾನಿ ಮೋದಿ ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ ದೇಶದ ಕ್ಷಮೆಯಾಚಿಸಬೇಕು.ಗೃಹಮಂತ್ರಿಯಾಗಿ ಈತ ನೀಡಿರುವ ಬಾಲಿಷ ಹೇಳಿಕೆಯನ್ನು ದಲಿತ ಸಮುದಾಯ ಖಂಡಿಸುತ್ತದೆ.ಅದೇ ರೀತಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸದನದಲ್ಲಿ, ''ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳಾ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರನ್ನು ಅಪಮಾನ ಮಾಡಿದ್ದಾರೆ. ಸಿ.ಟಿ.ರವಿ ಅವರನ್ನು ಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು' ಎಂದರು
ಸಂವಿಧಾನದ ಬಗ್ಗೆ ಅರಿವಿಲ್ಲದ ಕೇಂದ್ರ ದ. ಗೃಹ ಸಚಿವರನ್ನು ಈ ದೇಶದಿಂದ ಗಡಿಪಾರು ಮಾಡಿ. ಈ ದೇಶದ ಶಾಂತಿ ಮತ್ತು ಕಾನೂನಿನ ರಕ್ಷಣೆ ಮಾಡಲಿಕ್ಕೆ ದೇಶದ ಪ್ರಧಾನ ಮಂತ್ರಿಗಳಲ್ಲಿ ಒತ್ತಾಯ ಮಾಡುತ್ತಿದ್ದೇವೆ ಮತ್ತು ಸಿ.ಟಿ.ರವಿ. ಮಹಿಳೆಯರ ಬಗ್ಗೆ ನೀಚ ಶಬ್ದಗಳನ್ನು ಬಳಸಿರುತ್ತಾರೆ ಅವರನ್ನು ಕೂಡ ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕಾಗಿ ಎಂದು ಒತ್ತಾಯಿಸಿದರು. ಈ ವೇಳೆ ಚಲವಾದಿ ಕ್ಷೇಮಾಭಿವೃದ್ದಿ ಸಂಘದ ಪಿ.ವೆಂಕಟೇಶ್,ರಮೇಶ್, ಮತ್ತಿತರರು ಇದ್ದರು.