ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ : ಎಸ್.ಮುನಿಸ್ವಾಮಿ

| Published : Apr 02 2024, 01:01 AM IST / Updated: Apr 02 2024, 04:55 AM IST

ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ : ಎಸ್.ಮುನಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ದೇಶದ ಹಿತದೃಷ್ಟಿಯ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಾವುಗಳು ಒಟ್ಟಾಗಿದ್ದು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ಸಂಕಲ್ಪ ಮಾಡಬೇಕು. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬುರನ್ನುಗೆಲ್ಲಿಸಬೇಕು

 ಚಿಂತಾಮಣಿ :  ದೇಶದ ಭದ್ರತೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ನರೇಂದ್ರಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಬೇಕೆಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಜೆಕೆ ಭವನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮಹಾಮೈತ್ರಿ ಸಮನ್ವಯ ಸಭೆಯಲ್ಲಿ ಮಾತನಾಡಿ ದೇಶದ ಭದ್ರತೆ ಮತ್ತು ಸರ್ವಂಗೀಣ ಅಭಿವೃದ್ಧಿಗಾಗಿ ನರೇಂದ್ರಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್ ಬಾಬುರನ್ನು ಗೆಲ್ಲಿಸುವ ಮೂಲಕ ಪ್ರಧಾನಿಯವರ ಕೈ ಬಲಪಡಿಸಬೇಕೆಂದರು.

ಮಲ್ಲೇಶ ಬಾಬು ಗೆಲ್ಲಿಸಲು ಮನವಿ

ರಾಜಕಾರಣದಲ್ಲಿ ಯಾರು ಶಾಶತ್ವ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲವೆಂದು ಹಿಂದಿನ ಸಭೆಗಳಲ್ಲಿ ರಾಜಕೀಯವಾಗಿ ಒಬ್ಬರು ಇನ್ನೊಬ್ಬರನ್ನು ಟೀಕಿಸಿರಬಹುದು ಅದು ಆ ಸಂದರ್ಭಕ್ಕೆ ಅದು ಸೂಕ್ತವಾಗಿತ್ತು. ಇದೀಗ ದೇಶದ ಹಿತದೃಷ್ಟಿಯ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಾವುಗಳು ಒಟ್ಟಾಗಿದ್ದು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ಸಂಕಲ್ಪ ಮಾಡಬೇಕು. ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬುರನ್ನು ನನಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೇಸ್ ಅಭ್ಯರ್ಥಿ ಗೌತಮ್ ಕೋಲಾರ ಜನತೆಗೆ ಯಾರೆಂದು ಗೊತ್ತಿಲ್ಲ, ಕೇವಲ ಸುಳ್ಳು ಗ್ಯಾರಂಟಿಗಳನ್ನು ಹೇಳಿಕೊಂಡು ಮತಯಾಚನೆ ಮಾಡಬೇಕಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಘಟಬಂಧನ್ ಮತ್ತು ಕೆ.ಹೆಚ್‌ ಮುನಿಯಪ್ಪ ಎರಡು ಬಣಗಳ ಮೇಲಾಟದಲ್ಲಿ ಸ್ಥಳೀಯ ಅಭ್ಯರ್ಥಿಯ ಬದಲಾಗಿ ಹೊರಗಿನ ಅಭ್ಯರ್ಥಿಗೆ ಮಣೆಯಾಕಿದ್ದಾರೆ. ಈ ಕ್ಷೇತ್ರದ ಬಗ್ಗೆ ಏನೂ ಅರಿಯದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಿದರೆ ಕ್ಷೇತ್ರಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕೆಜಿಎಫ್ ಬಳಿ ಅಂಬೇಡ್ಕರ್ ಹೆಸರಿನಲ್ಲಿ ಜಮೀನು ಕೋಟ್ಯತರ ರೂಪಾಯಿ ಹಣವನ್ನು ಮೀಸಲಿಟ್ಟಿದ್ದರಾದರೂ ಅದನ್ನು ಕಾಂಗ್ರೆಸ್ ಸರ್ಕಾರ ಕಸಿದುಕೊಂಡಿದ್ದು ಅಂಬೇಡ್ಕರ್‌ರಿಗೆ ಅವಮಾನ ಮಾಡಿದ್ದು ಇಂತಹ ವಿಚಾರಗಳನ್ನು ಮತದಾರರ ಗಮನಕ್ಕೆ ತರಬೇಕೆಂದರು.

ಮಲ್ಲೇಶಬಾಬು ಗೆಲುವಿಗೆ ಸಂಕಲ್ಪ

ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಚಿಂತಾಮಣಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರುಗಳ ಸಮನ್ವಯ ಸಮಿತಿಯ ಸಭೆಯನ್ನು ನಡೆಸಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಮಲ್ಲೇಶ್‌ಬಾಬುರ ಗೆಲುವಿಗೆ ಪ್ರತಿಯೊಬ್ಬರು ಸಂಕಲ್ಪ ಮಾಡುತ್ತಿದ್ದೇವೆಂದರು. ಶ್ರೀರಾಮನ ಜನ್ಮಭೂಮಿಯಲ್ಲಿ ಶ್ರೀರಾಮಮಂದಿರವನ್ನು ನಿರ್ಮಿಸುವ ಮೂಲಕ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ದುಡಿಯುತ್ತಿರುವ ನಾಯಕರೆಂದರೆ ನರೇಂದ್ರ ಮೋದಿ ಎಂದರು.

ಎರಡು ಪಕ್ಷಗಳ ಮುಖಂಡರು ಹಳೆಯ ವೈಷಮ್ಯಗಳನ್ನು ಮರೆತು ಬೂತ್ ಮಟ್ಟದಿಂದಲೇ ಮತಗಳನ್ನು ಸೆಳೆದು ತಾಲ್ಲೂಕಿನಿಂದ ೧ ಲಕ್ಷಕ್ಕೂ ಹೆಚ್ಚಿನ ಮತಗಳ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬುರಿಗೆ ಸಿಗುವಂತೆ ಎಲ್ಲಾ ಮುಖಂಡರು ಶ್ರಮಿಸಬೇಕೆಂದರು.

ಸತ್ಯನಾರಾಯಣ ಮಹೇಶ್, ಸೀಕಲ್ ರಾಮಚಂದ್ರಗೌಡ, ದೇವನಹಳ್ಳಿ ವೇಣುಗೋಪಾಲ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಅರುಣ್‌ಬಾಬು, ರಾಜಣ್ಣ, ಮಂಜುನಾಥಚಾರಿ, ದಿನ್ನಮಿಂದಹಳ್ಳಿ ಬೈರಾರೆಡ್ಡಿ, ಸುಬ್ಬಾರೆಡ್ಡಿ, ಗುಡೇಶ್ರೀನಿವಾಸರೆಡ್ಡಿ, ಬನಹಳ್ಳಿ ರವಿ, ಚಂದ್ರಾರೆಡ್ಡಿ, ಗೌಸ್‌ಪಾಷ ಅಲ್ಲು, ಅಲ್ಲಬಕಾಷ್, ಪ್ರಕಾಶ್, ಸಂತೇಕಲ್ಲಹಳ್ಳಿ ರಾಜಣ್ಣ, ಮಹೇಶ್‌ಬೈ, ಶಿವಾರೆಡ್ಡಿ, ನಾರಾಯಣಸ್ವಾಮಿ, ಸಿ.ಆರ್.ವೆಂಕಟೇಶ್, ಮತ್ತಿತರರು ಉಪಸ್ಥಿತರಿದ್ದರು.