ಮೋದಿಗೆ ದೇಗುಲ ಕಟ್ಟೋಣ, ಅವರು ಅಲ್ಲೇ ಇರಲಿ: ದೀದಿ

| Published : May 23 2024, 01:06 AM IST / Updated: May 23 2024, 04:34 AM IST

ಸಾರಾಂಶ

‘ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ನರೇಂದ್ರ ಮೋದಿ  ಭಕ್ತ ಎಂದು  ಹೇಳುತ್ತಿದ್ದಾರೆ. ಇದನ್ನು ಕೇಳಿ ನಾನು ಅಳಬೇಕೋ, ನಗಬೇಕೋ ಅಥವಾ ನನ್ನ ತಲೆಯನ್ನು ಜಜ್ಜಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ. ಹೀಗಾಗಿ ಮೋದಿಯೇ ದೇವರಾದರೆ ಅವರಿಗೆ ದೇಗುಲ ಕಟ್ಟೋಣ, ಅವರು ಅಲ್ಲೇ ಇರಲಿ’  ಮಮತಾ ಬ್ಯಾನರ್ಜಿ ಲೇವಡಿ ಮಾಡಿದರು.

ಕೋಲ್ಕತಾ: ‘ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ನರೇಂದ್ರ ಮೋದಿಯ ಭಕ್ತ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದನ್ನು ಕೇಳಿ ನಾನು ಅಳಬೇಕೋ, ನಗಬೇಕೋ ಅಥವಾ ನನ್ನ ತಲೆಯನ್ನು ಜಜ್ಜಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ. 

ಹೀಗಾಗಿ ಮೋದಿಯೇ ದೇವರಾದರೆ ಅವರಿಗೆ ದೇಗುಲ ಕಟ್ಟೋಣ, ಅವರು ಅಲ್ಲೇ ಇರಲಿ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಲೇವಡಿ ಮಾಡಿದರು.

ಇತ್ತೀಚೆಗೆ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್‌ ಪಾತ್ರ ‘ಜಗನ್ನಾಥನು ಮೋದಿಯ ಭಕ್ತ’ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಮೋದಿ ಅವರು ಅಷ್ಟು ದೊಡ್ಡವರಾದರೆ ಅವರಿಗೆ ಒಂದು ದೇಗುಲ ನಿರ್ಮಾಣ ಮಾಡಿ, ಪೂಜೆ ಪುನಸ್ಕಾರಗಳನ್ನು ಮಾಡೋಣ. ಅವರಿಗೆ ಬೇಕಿದ್ದರೆ ಢೋಕ್ಲಾ ಅಥವಾ ಮಾಂಸ ಬೇಕಿದ್ದರೆ ಮಾಂಸದ ನೈವೇದ್ಯ ಮಾಡೋಣ. ಮೋದಿ ದೇಗುಲದಲ್ಲೇ ಇದ್ದುಬಿಡಲಿ. ಈ ಮೂಲಕ ದೇಶ ಮತ್ತು ಸಂವಿಧಾನವನ್ನು ಉಳಿಸಲಿ’ ಎಂದು ವ್ಯಂಗ್ಯ ವಾಡಿದರು.