ರಾಜ್ಯದಲ್ಲಿನ ಸಚಿವರ ಮೇಲೆ ಸ್ಟಿಂಗ್‌ ಆಪರೇಷನ್‌ ಆರೋಪ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ ಬೆನ್ನಲ್ಲೇ, ಯಾವುದೇ ತನಿಖೆಯಾದರೂ ದಾಖಲೆಗಳನ್ನು ಒದಗಿಸಿಕೊಡಲು ಸಿದ್ಧ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನವದೆಹಲಿ : ರಾಜ್ಯದಲ್ಲಿನ ಸಚಿವರ ಮೇಲೆ ಸ್ಟಿಂಗ್‌ ಆಪರೇಷನ್‌ ಆರೋಪ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ ಬೆನ್ನಲ್ಲೇ, ಯಾವುದೇ ತನಿಖೆಯಾದರೂ ದಾಖಲೆಗಳನ್ನು ಒದಗಿಸಿಕೊಡಲು ಸಿದ್ಧ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕುಮಾರಸ್ವಾಮಿಯವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ. ಅವರ ಎಲ್ಲ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ ಎಂದು ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಅವರೇ ಹೇಳಿದಂತೆ ಏನೇನು ದಾಖಲೆಗಳಿವೆಯೋ ಅದನ್ನು ತರಿಸಿ ಕೊಡ್ತೀನಿ, ತನಿಖಾಧಿಕಾರಿಗಳಿಗೆ ಅವರೇ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.

ಸ್ಟಿಂಗ್ ಆಪರೇಷನ್‌ ಸಂಸ್ಕೃತಿ ಹುಟ್ಟುಹಾಕಿದ್ದೇ ಡಿಕೆಶಿ - ಎಚ್‌.ಡಿ.ಕುಮಾರಸ್ವಾಮಿ

ದೆಹಲಿಯ ಕರ್ನಾಟಕ ಭವನದ ಬಳಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ ಸಂಸ್ಕೃತಿ ಹುಟ್ಟುಹಾಕಿದ್ದೇ ಡಿಕೆಶಿ, ಸಂಪುಟದ ಸಹೋದ್ಯೋಗಿಗಳ ಮೇಲೆಯೇ ಸಿಎಂ ಗೂಢಚಾರಿಕೆ ನಡೆಸುತ್ತಿದ್ದಾರೆ’ ಎನ್ನುವ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಬಹಳ ಸಂತೋಷ. ಕುಮಾರಸ್ವಾಮಿಯವರ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ. ಅವರೇ ಹೇಳಿದಂತೆ ಅದೇನು ದಾಖಲೆಗಳಿವೆಯೋ ಅದನ್ನು ತರಿಸಿ ಅವರಿಗೆ ಕೊಡುತ್ತೇನೆ. ತನಿಖೆ ಮಾಡಲು ಯಾರಿಗೋ ನೀಡಬೇಕು ಎಂದು ಹೇಳಿದ್ದಾರಲ್ಲ, ಅವರಿಗೆ ದಾಖಲೆಗಳನ್ನು ಕೊಡಲಿ’ ಎಂದು ತಿರುಗೇಟು ನೀಡಿದರು.

- ಒಳ್ಳೆಯ ವಿಚಾರದ ಬಗ್ಗೆ ಗಮನ ಸೆಳೆದಿದ್ದಾರೆ

-ನನ್ನನ್ನೂ ಸೇರಿ ರಾಜ್ಯದ ಸಚಿವರ ಮೇಲೆ ಸ್ಟಿಂಗ್‌ ಯತ್ನ ನಡೆಯುತ್ತಿದೆ ಎಂದಿದ್ದ ಡಿಕೆಶಿ

- ತನಿಖೆ ನಡೆಸದೇ ಪ್ರಕರಣವನ್ನು ಮುಚ್ಚಿ ಹಾಕುತ್ತಿರುವುದೇಕೆ ಎಂದು ಕೇಳಿದ್ದ ಎಚ್‌ಡಿಕೆ

- ಯಾವುದೇ ತನಿಖೆಯಾದರೂ ದಾಖಲೆಗಳನ್ನು ಒದಗಿಸಲು ಸಿದ್ಧ ಎಂದು ಡಿಕೆ ಸಡ್ಡು

- ಕುಆಮರಸ್ವಾಮಿ ಒಳ್ಳೆಯ ವಿಚಾರವನ್ನು ರಾಜ್ಯದ ಗಮನಕ್ಕೆ ತಂದಿದ್ದಾರೆ ಎಂದು ಟಾಂಗ್‌