ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚೆಂಗಾವಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ, ಎತ್ತಿನಹೊಳೆ ಯೋಜನೆಯ ಸಿಸಿ ರಸ್ತೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಗನವಾಡಿ ಕಟ್ಟಡ ಕಾಮಗಾರಿ ಒಟ್ಟು ಎಂಟು ಗ್ರಾಮದ 4.50 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿಪೂಜೆ | Kannada Prabha
Image Credit: KP
ಕಳೆದ ಐದು ತಿಂಗಳಿಂದ ಯಾವ ಅನುದಾನ ನೀಡದೆ ಅಭಿವೃದ್ಧಿ ಶೂನ್ಯಗೊಳಿಸಿದ ಕಾಂಗ್ರೆಸ್ ಸರ್ಕಾರ ಜಾತಿ ಧರ್ಮ ಬಳಸಿ ಅಧಿಕಾರ ಬಳಸಿಕೊಳ್ಳಲು ಮಾತ್ರ ಮುಂದಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು.
ಗುಬ್ಬಿ: ಕಳೆದ ಐದು ತಿಂಗಳಿಂದ ಯಾವ ಅನುದಾನ ನೀಡದೆ ಅಭಿವೃದ್ಧಿ ಶೂನ್ಯಗೊಳಿಸಿದ ಕಾಂಗ್ರೆಸ್ ಸರ್ಕಾರ ಜಾತಿ ಧರ್ಮ ಬಳಸಿ ಅಧಿಕಾರ ಬಳಸಿಕೊಳ್ಳಲು ಮಾತ್ರ ಮುಂದಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು. ಸಿ.ಎಸ್.ಪುರ ಹೋಬಳಿ ಚೆಂಗಾವಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ, ಎತ್ತಿನಹೊಳೆ ಯೋಜನೆಯ ಸಿಸಿ ರಸ್ತೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಗನವಾಡಿ ಕಟ್ಟಡ ಕಾಮಗಾರಿ ಒಟ್ಟು ಎಂಟು ಗ್ರಾಮದ 4.50 ಕೋಟಿ ರು.ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ದಲಿತ ಸಿಎಂ ಕೂಗು ಸ್ವಾಗತಾರ್ಹ. ಎಲ್ಲರೂ ಮಾಡಿದಂತಹ ಅಧಿಕಾರ ದಲಿತರು ಮಾಡಲಿ. ಇದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಕ್ಕೆ ಟಾಂಗ್ ನೀಡಿದರು. ಲೋಕಸಭಾ ಚುನಾವಣೆ ವಿಚಾರದಲ್ಲಿ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಬಿಜೆಪಿ ಮೈತ್ರಿಗೆ ಸಂಪೂರ್ಣ ಸಹಮತವಿದೆ. ಸಧ್ಯದ ಪಂಚರಾಜ್ಯಗಳ ಚುನಾವಣೆ ನಂತರ ಸ್ಥಾನ ಹಂಚಿಕೆ ಮುನ್ನಲೆಗೆ ಬರಲಿದೆ. ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದ ಅವರು ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡುವಂತಿಲ್ಲ. ಗುಣಮಟ್ಟದ ಕೆಲಸ ನಿರೀಕ್ಷೆಯಂತೆ ನಡೆಯಲಿ. ಗುಣಮಟ್ಟ ಕಾಪಾಡುವಲ್ಲಿ ಸಂಬಂಧಪಟ್ಟ ಇಂಜಿನಿಯರ್ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬರಗಾಲ ಪೀಡಿತ ಜಿಲ್ಲೆಗೆ ಹೇಮಾವತಿ ನದಿ ನೀರು ಅತ್ಯವಶ್ಯ. ಸರ್ಕಾರದಿಂದ ಯಾವ ಪರಿಹಾರ ನಿರೀಕ್ಷೆ ಇಲ್ಲದ ಕಾರಣ ನೀರು ಹಂಚಿಕೆಯ ಸಭೆಯಲ್ಲಿ ಚರ್ಚಿಸಿ ಹೇಮಾವತಿ ಜಿಲ್ಲೆಗೆ ಹರಿಸಲು ಶ್ರಮಿಸಿದ್ದೇವೆ. ರೈತರು ಕೆರೆಗೆ ನೀರು ತುಂಬಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದ ಅವರು ಸಿ.ಎಸ್.ಪುರ ಹೋಬಳಿಯ ಹಲವು ಗ್ರಾಮದ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದ ಜೊತೆ ಗುದ್ದಾಡಿ ಅನುದಾನ ತರುವಂತಾಗಿದೆ. ಸಧ್ಯಕ್ಕೆ 5ಕೋಟಿ ಕೆಲಸಕ್ಕೆ ಚಾಲನೆ ದೊರಕಿದೆ. ಎತ್ತಿನಹೊಳೆ ಯೋಜನೆಯ ಎರಡು ಕೋಟಿ ಹಣದಲ್ಲಿ ಸಿಸಿ ರಸ್ತೆಗಳು, ಒಂದೂವರೆ ಕೋಟಿ ಜೆಜೆಎಂ ಮನೆ ಮನೆಗೆ ನಳ ಸಂಪರ್ಕ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಒಂದು ಕೋಟಿ ರು.ಗಳಲ್ಲಿ ಅಂಗನವಾಡಿ ಕಟ್ಟಡ ಹೀಗೆ ಅಭಿವೃದ್ಧಿ ಆರಂಭಿಸಿದ್ದೇವೆ ಎಂದರು. ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಹೋಬಳಿ ಅಧ್ಯಕ್ಷ ಜಗದೀಶ್, ಗ್ರಾ.ಪಂ ಅಧ್ಯಕ್ಷ ಗೋವಿಂದ್, ಮುಖಂಡರಾದ ಚಂಗಾವಿ ಕುಮಾರ್, ಗುತ್ತಿಗೆದಾರ ರಾಘವೇಂದ್ರ, ನರಸಿಂಹಮೂರ್ತಿ, ಈಶ್ವರಗೌಡ, ಅವ್ವೇರಹಳ್ಳಿ ಕೃಷ್ಣಪ್ಪ, ಗಿರೀಶ್ ಇದ್ದರು. ಫೋಟೊ.... 29 ಜಿಯುಬಿ1 ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಚೆಂಗಾವಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ, ಎತ್ತಿನಹೊಳೆ ಯೋಜನೆಯ ಸಿಸಿ ರಸ್ತೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಗನವಾಡಿ ಕಟ್ಟಡ ಕಾಮಗಾರಿ ಒಟ್ಟು ಎಂಟು ಗ್ರಾಮದ 4.50 ಕೋಟಿ ರು. ಕಾಮಗಾರಿಗೆ ಗುದ್ದಲಿ ಪೂಜೆ
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.