ತೆಲಂಗಾಣ ಮಾದಿಗ ಸಂಘದ ಬೆಂಬಲ ಬಿಜೆಪಿಗೆ: ಅಧ್ಯಕ್ಷ

| Published : Nov 21 2023, 12:45 AM IST

ತೆಲಂಗಾಣ ಮಾದಿಗ ಸಂಘದ ಬೆಂಬಲ ಬಿಜೆಪಿಗೆ: ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿಗಳಲ್ಲಿನ ಉಪ ಸಮುದಾಯಗಳ ವರ್ಗೀಕರಣದ ಸಮಸ್ಯೆ ಪರಿಹರಿಸಲು ಸಮಿತಿ ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ ಬೆನ್ನಲ್ಲೇ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಮ್‌ಆರ್‌ಪಿಎಸ್‌)ಯ ಸಂಸ್ಥಾಪಕ ಮಂದ ಕೃಷ್ಣ ಮಾದಿಗ ಅವರು ಘೋಷಿಸಿದ್ದಾರೆ

ಹೈದರಾಬಾದ್‌: ಪರಿಶಿಷ್ಟ ಜಾತಿಗಳಲ್ಲಿನ ಉಪ ಸಮುದಾಯಗಳ ವರ್ಗೀಕರಣದ ಸಮಸ್ಯೆ ಪರಿಹರಿಸಲು ಸಮಿತಿ ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ ಬೆನ್ನಲ್ಲೇ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಮ್‌ಆರ್‌ಪಿಎಸ್‌)ಯ ಸಂಸ್ಥಾಪಕ ಮಂದ ಕೃಷ್ಣ ಮಾದಿಗ ಅವರು ಘೋಷಿಸಿದ್ದಾರೆ. ಅಲ್ಲದೇ ಬಿಜೆಪಿಗೇ ಬೆಂಬಲ ಸೂಚಿಸುವಂತೆ ಮಾದಿಗ ಸಮಿತಿ ಸೇರಿದಂತೆ ಇತರ 9 ಮಾದಿಗ ಸಮುದಾಯ ಸಂಘಟನೆಗಳಿಗೆ ಕರೆ ನೀಡಿದ್ದಾರೆ. ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ರ್‍ಯಾಲಿ ವೇಳೆ ಪ್ರಧಾನಿ ಮೋದಿ ಕೃಷ್ಣ ಅವರನ್ನು ತಬ್ಬಿ ಸಮಾಧಾನ ಮಾಡಿದ್ದರು. ವಿವಿಧ ಸಂಘಟನೆಗಳಿಗೆ ಪತ್ರ ಬರೆದಿರುವ ಅವರು ಎಸ್‌ಸಿ ಮೀಸಲಾತಿ ವರ್ಗೀಕರಣದ ಬೇಡಿಕೆಯಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್‌ಸಿ ವರ್ಗೀಕರಣಕ್ಕೆ ಕಾನೂನು ಜಾರಿಗೊಳಿಸಲು ವಿಫಲವಾಗಿದೆ ಕಳೆದ ಹತ್ತು ವರ್ಷಗಳಲ್ಲಿ ಎಸ್‌ಸಿ ವರ್ಗೀಕರಣದ ಬಗ್ಗೆ ಸಂಸತ್ತಿನಲ್ಲಿ ಒಂದೇ ಒಂದು ಮಾತನ್ನೂ ಆಡಿಲ್ಲ’ ಎಂದಿದ್ದಾರೆ.