ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ, ದಸರಾ,ದೀಪಾವಳಿ, ಕಾರ್ತಿಕ ಸೋಮವಾರ ವಿಶೇಷ ಪೂಜೆ

| Published : Oct 12 2023, 12:00 AM IST / Updated: Oct 12 2023, 12:01 AM IST

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ, ದಸರಾ,ದೀಪಾವಳಿ, ಕಾರ್ತಿಕ ಸೋಮವಾರ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರದಂದು ಜಾತ್ರಾ ಮಹೋತ್ಸವಗಳು, ವಿಶೇಷ ಪೂಜೆ, ಉತ್ಸವಾದಿಗಳು ನಡೆಯಲಿವೆ. ಅ. ೧೨ರಂದು ಮಹಾಲಯ ಜಾತ್ರೆ ಪ್ರಾರಂಭವಾಗಲಿದೆ. ೧೩ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ಹಾಗೂ ೧೪ರಂದು ಮಹಾಲಯ ಅಮವಾಸ್ಯೆ ವಿಶೇಷ ಉತ್ಸವಾದಿಗಳು ಜರುಗಲಿವೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮವಾಸ್ಯೆ, ದಸರಾ, ದೀಪಾವಳಿ, ಕಾರ್ತಿಕ ಸೋಮವಾರದಂದು ಜಾತ್ರಾ ಮಹೋತ್ಸವಗಳು, ವಿಶೇಷ ಪೂಜೆ, ಉತ್ಸವಾದಿಗಳು ನಡೆಯಲಿವೆ. ಅ. ೧೨ರಂದು ಮಹಾಲಯ ಜಾತ್ರೆ ಪ್ರಾರಂಭವಾಗಲಿದೆ. ೧೩ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ಹಾಗೂ ೧೪ರಂದು ಮಹಾಲಯ ಅಮವಾಸ್ಯೆ ವಿಶೇಷ ಉತ್ಸವಾದಿಗಳು ಜರುಗಲಿವೆ. ಅ. ೧೫ರಂದು ದಸರಾ ಜಾತ್ರಾ ಮಹೋತ್ಸವದ ಶರನ್ನವರಾತ್ರಿ ಉಯ್ಯಾಲೋತ್ಸವ ಪ್ರಾರಂಭವಾಗಲಿದೆ. ೨೩ರಂದು ಮಹಾನವಮಿ, ಆಯುಧಪೂಜೆ ಹಾಗೂ ೨೪ರಂದು ವಿಜಯದಶಮಿ, ಕುದುರೆ ವಾಹನೋತ್ಸವ ನಡೆಯಲಿದೆ. ನ. ೧೦ರಂದು ದೀಪಾವಳಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಲಿದೆ. ೧೧ ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಮತ್ತು ಉತ್ಸವಾದಿಗಳು, ೧೨ರಂದು ನರಕ ಚತುರ್ದಶಿ ವಿಶೇಷ ಉತ್ಸವಾದಿಗಳು, ೧೩ರಂದು ಅಮಾವಾಸ್ಯೆ, ಹಾಲರುವೆ ಉತ್ಸವ ಹಾಗೂ ೧೪ರಂದು ದೀಪಾವಳಿ ಮಹಾರಥೋತ್ಸವವು ಬೆಳಗ್ಗೆ ೮.೫೦ ರಿಂದ ೯.೧೦ ರವರೆಗೆ ಜರುಗಲಿದೆ. ನ. ೨೦ರಂದು ಮೊದಲನೇ ಕಾರ್ತಿಕ ಸೋಮವಾರ, ೨೭ರಂದು ಎರಡನೇ ಕಾರ್ತಿಕ ಸೋಮವಾರ, ಡಿಸೆಂಬರ್ ೪ರಂದು ಮೂರನೇ ಕಾರ್ತಿಕ ಸೋಮವಾರದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ೧೧ರಂದು ನಾಲ್ಕನೇ ಕಾರ್ತಿಕ ಸೋಮವಾರದಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ರಾತ್ರಿ ಶ್ರೀ ಮಹದೇಶ್ವರ ಜ್ಯೋತಿ ದರ್ಶನ ಹಾಗೂ ೧೨ರಂದು ಕಾರ್ತಿಕ ಅಮಾವಾಸ್ಯೆ ವಿಶೇಷ ಸೇವೆ ಉತ್ಸವಗಳು ನಡೆಯಲಿವೆ ಎಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.