ನೈತಿಕ ಸಮಿತಿ ವಿಚಾರಣೆಗೆ 31ಕ್ಕೆ ಬದಲು ನ.5 ನಂತರ ಬರುವೆ: ಸಂಸದೆ ಮಹುವಾ
KannadaprabhaNewsNetwork | Published : Oct 28 2023, 01:16 AM IST
ನೈತಿಕ ಸಮಿತಿ ವಿಚಾರಣೆಗೆ 31ಕ್ಕೆ ಬದಲು ನ.5 ನಂತರ ಬರುವೆ: ಸಂಸದೆ ಮಹುವಾ
ಸಾರಾಂಶ
ಲೋಕಸಭೆಯಲ್ಲಿ ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.31ರಂದು ನೈತಿಕ ಸಮಿತಿ ಎದುರು ಹಾಜರಾಗಬೇಕು ಎಂದು ನೀಡಿದ್ದ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಸಂಸದೆ ಮಹುವಾ ಮೊಯಿತ್ರಾ, ‘31ರಂದು ಬರಲು ಆಗದು. ನ.5ರ ಬಳಿಕ ವಿಚಾರಣೆಗೆ ಬರುತ್ತೇನೆ’ ಎಂದು ತಿಳಿಸಿದ್ದಾರೆ.
ಕೋಲ್ಕತಾ: ಲೋಕಸಭೆಯಲ್ಲಿ ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.31ರಂದು ನೈತಿಕ ಸಮಿತಿ ಎದುರು ಹಾಜರಾಗಬೇಕು ಎಂದು ನೀಡಿದ್ದ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಸಂಸದೆ ಮಹುವಾ ಮೊಯಿತ್ರಾ, ‘31ರಂದು ಬರಲು ಆಗದು. ನ.5ರ ಬಳಿಕ ವಿಚಾರಣೆಗೆ ಬರುತ್ತೇನೆ’ ಎಂದು ತಿಳಿಸಿದ್ದಾರೆ. ಈ ಬಗ್ಗೆ ನೈತಿಕ ಸಮಿತಿ ಮುಖ್ಯಸ್ಥರಿಗೆ ಪತ್ರ ಬರೆದಿರುವುದನ್ನು ಟ್ವೀಟ್ ಮಾಡಿರುವ ಮಹುವಾ,‘ನನ್ನ ಕೃಷ್ಣಾನಗರ ಕ್ಷೇತ್ರದಲ್ಲಿ ನ.4ರವರೆಗೂ ಪೂರ್ವ ನಿಗದಿತ ಕಾರ್ಯಕ್ರಮಗಳಿದೆ. ಹಾಗಾಗಿ ನ.5ರ ಬಳಿಕ ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ಮುಖ್ಯಸ್ಥರಿಗೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದ್ದಾರೆ. ಅದಾನಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಸಂಸದೆ ಮಹುವಾ ಉದ್ಯಮಿ ಹಿರನಂದಾನಿ ಅವರಿಂದ ಹಣ ಪಡೆದಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ದೂರು ನೀಡಿದ್ದರು. ಹೀಗಾಗಿ ದುಬೆ ಹಾಗೂ ವಕೀಲ ಅನಂತ್ ದೇಹದ್ರಾಯ್ ಅವರ ಹೇಳಿಕೆಯನ್ನು ಗುರುವಾರ ನೈತಿಕ ಸಮಿತಿ ದಾಖಲಿಸಿಕೊಂಡಿತ್ತು. ಬಳಿಕ ಅ.31ರಂದು ವಿಚಾರಣೆಗೆ ಹಾಜರಾಗುವಂತೆ ಸಂಸದೆ ಮಹುವಾಗೆ ಸಮನ್ಸ್ ಜಾರಿ ಮಾಡಿತ್ತು.