ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ
KannadaprabhaNewsNetwork | Published : Oct 14 2023, 01:01 AM IST
ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ
ಸಾರಾಂಶ
ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ದೇಶ ಪ್ರೇಮ ಬಿಂಬಿಸುವ ಕಾರ್ಯಕ್ರಮವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ, ನೆಹರು ಯುವಕೇಂದ್ರ, ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ದೇಶ ಪ್ರೇಮ ಬಿಂಬಿಸುವ ಕಾರ್ಯಕ್ರಮವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ, ನೆಹರು ಯುವಕೇಂದ್ರ, ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ತಾಲೂಕಿನ ಪ್ರತಿ ಗ್ರಾಮದ ಮೂಲೆಯಿಂದ ಸುಮಾರು ೨ ರಿಂದ ೨.೫ ಕೆ.ಜಿ ಯಷ್ಟು ಮಣ್ಣು ಶೇಖರಣೆ ಮಾಡಿ ಜಿಲ್ಲೆಯಿಂದ ರಾಜ್ಯ ಹಾಗೂ ದೆಹಲಿಗೆ ಕಳುಹಿಸುವ ವಿಶಿ? ಕಾರ್ಯಕ್ರಮವಾಗಿದೆ. ದೇಶದ ಸಾರ್ಥಕ ಹಾಗೂ ಸೇವೆಯನ್ನ ಪ್ರತಿಪಾದಿಸುವ ಕಾರ್ಯಕ್ರಮವಾಗಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳಿಂದ ದೇಶಪ್ರೇಮವು ಪ್ರಜ್ವಲಿಸುವಂತಾಗಲಿದೆ ಎಂದರು. ದೇಶದ ಮೂಲೆ ಮೂಲೆಯಿಂದ ಮಣ್ಣು ಶೇಖರಣೆ ಮಾಡಿ ವಿವಿಧ ರೀತಿಯ ಸಸ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿರುವ ಕಾರ್ಯಕ್ರವಾಗಿದೆ. ನನ್ನ ಮಣ್ಣು ನನ್ನ ದೇಶ ಎಂಬ ಅಭಿಯಾನವು ಯಶಸ್ಸು ಕಂಡಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದೇ ನಮ್ಮೆಲ್ಲರ ಭಾಗ್ಯವಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕಿರಣ್ ಪಟ್ನೆಕರ್ ಅವರು ಮಾತನಾಡಿ ನನ್ನ ಮಣ್ಣು ನನ್ನ ದೇಶ ಎಂಬ ಅಭಿಯಾನವು ಭಾರತ ಸರ್ಕಾರದ ಹಮ್ಮೆಯ ಕಾರ್ಯಕ್ರಮವಾಗಿದೆ. ಪ್ರತಿ ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ನಂತರ ರಾಜ್ಯ ಮಟ್ಟಕ್ಕೆ ಹಾಗೂ ಕೇಂದ್ರ ಸ್ಥಳಕ್ಕೆ ಕಳುಹಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ದೇಶದ ಸಂಸ್ಕೃತಿ, ಏಕತೆ ಸಾರುವ ವಿನೂತನ ಅಭಿಯಾನವಾಗಿದೆ ಎಂದರು. ನಗರದ ತಾಲೂಕು ಪಂಚಾಯತ್ ಕಾರ್ಯಾಲಯದಿಂದ ಕಳಸ ಯಾತ್ರೆಯು ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿತು.ತಾಲೂಕು ಕಾರ್ಯಾಲಯದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಅಮೃತ ಕಳಸ ಹೊತ್ತು ಕಲಾತಂಡಗಳ ಮೂಲಕ ಸಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿಗಳಿಗೆ ಅಮೃತ ಕಳಸ ನೀಡುವ ಮೂಲಕ ಮುಕ್ತಾಯಗೊಂಡಿತು. ಚಾಮರಾಜನಗರ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ, ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಪ್ರಕಾಶ್ ಕುಮಾರ್, ನೆಹರು ಯುವ ಕೇಂದ್ರ ಅಧಿಕಾರಿ ಅಭಿಷೇಕ್ ಚವರೆ, ಎಸ್.ಬಿ.ಎಂ. ಮಹದೇವ ಹಾಗೂ ಇತರರು ಭಾಗವಹಿಸಿದ್ದರು. ---------- 13chn15 ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು. ------ 13ಸಿಎಚ್‌ಎನ್16 ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ನಡೆಯಿತು.