ಸಾರಾಂಶ
ದಾಳಿಕೋರರ ಪ್ರವೇಶಕ್ಕೆ ಕಾರಣವಾದ ಮೈಸೂರು ಸಂಸದರ ಕುರಿತು ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬ ಸರಳ ಕಾರಣಕ್ಕಾಗಿಯೇ ಮೋದಿ ಚರ್ಚೆಯಿಂದ ಪಲಾಯನ ಮಾಡುತ್ತಿದ್ದಾರೆ’ ಎಂದು ಜೈರಾಂ ರಮೇಶ್ ಟೀಕಿಸಿದ್ದಾರೆ.
‘ಪ್ರತಾಪ್ ಸಿಂಹ ಕುರಿತ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಪಲಾಯನ: ಜೈರಾಂನವದೆಹಲಿ: ‘ಸಂಸತ್ ದಾಳಿ ಘಟನೆ ಗಂಭೀರವಾಗಿದೆ. ಈ ಕುರಿತು ಚರ್ಚೆಗಿಂತ ಹೆಚ್ಚಾಗಿ ತನಿಖೆ ನಡೆಯಬೇಕಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಸಲಹೆ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ. ಇದು ಮೋದಿ ಅವರ ಪಲಾಯನವಾದವಾಗಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್ ಟೀಕಿಸಿದ್ದಾರೆ.ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈರಾಂ ರಮೇಶ್, ‘ದಾಳಿಕೋರರ ಪ್ರವೇಶಕ್ಕೆ ಕಾರಣವಾದ ಮೈಸೂರು ಸಂಸದರ ಕುರಿತು ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂಬ ಸರಳ ಕಾರಣಕ್ಕಾಗಿಯೇ ಮೋದಿ ಚರ್ಚೆಯಿಂದ ಪಲಾಯನ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಡಿ.13ರಂದು ಲೋಕಸಭೆಯಲ್ಲಿ ನಡೆದ ಘಟನೆ ಕುರಿತು ಕೊನೆಗೂ ಪ್ರಧಾನಿ ಮೌನ ಮುರಿದಿದ್ದಾರೆ. ಘಟನೆ ಕುರಿತು ಚರ್ಚೆ ಬಯಲು ತನಿಖೆ ನಡೆಯಬೇಕು; ಅದೀಗ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಾವು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಈ ಮೊದಲು ಮತ್ತು ಮುಂದೆಯೂ ಮಾಡುವುದು ಒಂದೇ ಆಗ್ರಹ. ಅದು ಡಿ.13ರಂದು ನಡೆದ ಘಟನೆಗೆ ಕಾರಣವೇನು? ಮತ್ತು ಅದು ಹೇಗಾಯ್ತು ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವರು ಉತ್ತರ ನೀಡಬೇಕು ಎಂಬುದು’ ಎಂದಿದ್ದಾರೆ.