10 ವರ್ಷಗಳಲ್ಲಿ ಮೋದಿ ಸಾಧನೆ ಅಮೋಘ: ಶೋಭಾ

| Published : Apr 05 2024, 01:47 AM IST / Updated: Apr 05 2024, 04:21 AM IST

ಸಾರಾಂಶ

ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ ಹಾಗೂ ಗಡಿಗಳ ರಕ್ಷಣೆಗಾಗಿ ಮೋದಿಯವರು ದುಡಿದಿದ್ದಾರೆ ಎಂದು ಉತ್ತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

 ದಾಸರಹಳ್ಳಿ: ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ ಹಾಗೂ ಗಡಿಗಳ ರಕ್ಷಣೆಗಾಗಿ ಮೋದಿಯವರು ದುಡಿದಿದ್ದಾರೆ ಎಂದು ಉತ್ತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪ್ರಮುಖ ಮುಖಂಡರ ಚುನಾವಣಾ ಕಾರ್ಯತಂತ್ರ ಸಭೆಯಲ್ಲಿ ಮಾತನಾಡಿದರು.

ಶಾಸಕ ಎಸ್.ಮುನಿರಾಜು ಮಾತನಾಡಿ, ರಾಜ್ಯ ಸರ್ಕಾರ ಕುಡಿಯುವುದಕ್ಕೆ ನೀರು ಕೊಡೋಕೆ ಆಗ್ತಾ ಇಲ್ಲ. ಹೋದ ಕಡೆಗಳಲ್ಲಿ ನೀರಿಗೆ ಹಾಹಾಕಾರವಿದೆ. ಅದರ ಕಡೆ ಗಮನಹರಿಸುತ್ತಿಲ್ಲ. ಬೆಂಗಳೂರಿನಲ್ಲಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಮುನಿಸ್ವಾಮಿ ಅವರ ಮನೆಗೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್.ಮುನಿರಾಜು ಭೇಟಿ ನೀಡಿ ಚುನಾವಣಾ ಪ್ರಚಾರದ ಬಗ್ಗೆ ಚರ್ಚಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಬಿ.ಸುರೇಶ್, ಪಿ.ಎಚ್.ರಾಜು, ಬಿ.ಎಂ.ನಾರಾಯಣ್, ಕೃಷ್ಣಮೂರ್ತಿ, ಭರತ್ ಸೌಂದರ್ಯ, ಉಮಾದೇವಿ ನಾಗರಾಜು, ಬಿ.ಟಿ.ಶ್ರೀನಿವಾಸ್, ಟಿ.ಎಸ್.ಗಂಗರಾಜು, ಪಾಂಡುರಂಗ ರಾವ್, ಶಿವಕುಮಾರ್, ಕೆಂಪೇಗೌಡ ಸುರೇಶ್, ರಮೇಶ್ ಯಾದವ್, ಜಬ್ಬರ್ ಇದ್ದರು.