ಮಧ್ಯಪ್ರದೇಶ, ಛತ್ತೀಸ್‌ಗಢ ಸಿಎಂಗಳ ಪ್ರಮಾಣ

| Published : Dec 14 2023, 01:30 AM IST

ಸಾರಾಂಶ

ಮಧ್ಯಪ್ರದೇಶಕ್ಕೆ ಮೋಹನ್‌, ಛತ್ತೀಸ್‌ಗಢಕ್ಕೆ ವಿಷ್ಣುದೇವ ನೂತನ ಸಿಎಂ

ಮಧ್ಯಪ್ರದೇಶಕ್ಕೆ ಮೋಹನ್‌, ಛತ್ತೀಸ್‌ಗಢಕ್ಕೆ ವಿಷ್ಣುದೇವ ನೂತನ ಸಿಎಂ

ಎರಡೂ ರಾಜ್ಯಗಳಲ್ಲಿ ತಲಾ ಇಬ್ಬರು ಡಿಸಿಎಂಗಳಿಂದಲೂ ಪ್ರಮಾಣವಚನ

ಭೋಪಾಲ್‌/ರಾಯ್‌ಪುರ: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬುಧವಾರ ನೂತನ ಸರ್ಕಾರ ರಚನೆಯಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್‌ ಯಾದವ್‌, ಉಪಮುಖ್ಯಮಂತ್ರಿಗಳಾಗಿ ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವಡಾ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನು ರಾಯ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ವಿಷ್ಣುದೇವ ಸಾಯ್‌, ಉಪಮುಖ್ಯಮಂತ್ರಿಗಳಾಗಿ ಅರುಣ್‌ ಸಾವೊ ಮತ್ತು ವಿಜಯ್‌ ಶರ್ಮಾ ಪ್ರತಿಜ್ಞಾವಿಧಿ ಸ್ವೀಕರಿಸಿದರು.ಎರಡೂ ರಾಜ್ಯಗಳಲ್ಲಿ ನಡೆದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆಪಿ ನಡ್ಡಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.

ಇನ್ನು ಬಿಜೆಪಿ ಗೆಲುವು ಸಾಧಿಸಿದ ಇನ್ನೊಂದು ರಾಜ್ಯವಾದ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್‌ ಶರ್ಮಾ ಡಿ.15ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.