ನಡ್ಡಾ ಅವಧಿ 6 ತಿಂಗಳು ವಿಸ್ತರಣೆ ಸಾಧ್ಯತೆ

| Published : Jul 01 2024, 01:52 AM IST / Updated: Jul 01 2024, 04:54 AM IST

jp nadda

ಸಾರಾಂಶ

: ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರ ಬಿಜೆಪಿ ಅಧ್ಯಕ್ಷ ಅವಧಿ ಸುಮಾರು 6 ತಿಂಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದೇ ವೇಳೆ 1 ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ದಲಿತ ಅಥವಾ ಹಿಂದುಳಿದ ವರ್ಗದ ಮಹಿಳಾ ನಾಯಕಿಯೊಬ್ಬರನ್ನು ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರ ಬಿಜೆಪಿ ಅಧ್ಯಕ್ಷ ಅವಧಿ ಸುಮಾರು 6 ತಿಂಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದೇ ವೇಳೆ 1 ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ದಲಿತ ಅಥವಾ ಹಿಂದುಳಿದ ವರ್ಗದ ಮಹಿಳಾ ನಾಯಕಿಯೊಬ್ಬರನ್ನು ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

2020ರಲ್ಲಿ ಅಮಿತ್‌ ಶಾ ಅವರ ನಂತರ ಅಧ್ಯಕ್ಷರಾದ ನಡ್ಡಾ ಅವರ ಅವಧಿಯಲ್ಲಿ ಬಿಜೆಪಿ ಹಲವು ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. 2024ರ ಜನವರಿಯಲ್ಲಿಯೇ ನಡ್ಡಾ ಅವಧಿ ಮುಕ್ತಾಯಗೊಂಡಿದ್ದರೂ ಲೋಕಸಭೆ ಚುನಾವಣೆ ಕಾರಣ ವಿಸ್ತರಿಸಲಾಗಿತ್ತು.

ಈಗ ಇದೇ ವರ್ಷದ ಅಂತ್ಯಕ್ಕೆ ಮಹಾರಾಷ್ಟ್ರ, ಜಾರ್ಖಂಡ್‌, ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಗಳು ನಿಗದಿಯಾಗಿರುವ ಕಾರಣ ಪಕ್ಷದ ನಾಯಕತ್ವ ಬದಲಾವಣೆಗೆ ವರಿಷ್ಠರಿಗೆ ಮನಸ್ಸಿಲ್ಲ ಎನ್ನಲಾಗಿದೆ. ಜತೆಗೆ ನಡ್ಡಾ ನಾಯಕತ್ವಕ್ಕೆ ಎಲ್ಲೆಡೆ ಮೆಚ್ಚುಗೆ ಇರುವುದರಿಂದ ಸದ್ಯಕ್ಕೆ 6 ತಿಂಗಳ ಮಟ್ಟಿಗೆ ಅವರನ್ನೇ ಮುಂದುವರಿಸುವ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಒಂದು ವೇಳೆ ನಡ್ಡಾ ಅವರೇ ಮುಂದುವರೆದರೆ, 1 ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಿ ಒಬಿಸಿ, ದಲಿತ ಸಮುದಾಯದ ಮಹಿಳಾ ನಾಯಕಿಯನ್ನು ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.