ಸಾರಾಂಶ
ಹೈದರಾಬಾದ್: ತೆಲಂಗಾಣದಲ್ಲಿ ಲೋಕಸಭೆ ಚುನಾವಣಾ ಪ್ರಚಾರದ ರ್‍ಯಾಲಿಯಲ್ಲಿ ಮಕ್ಕಳನ್ನು ಬಳಸಿದ್ದಾರೆ ಎನ್ನುವ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ಪೊಲೀಸರು ರದ್ದುಗೊಳಿಸಿದ್ದಾರೆ.
ಮೇ 01 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದ ಲಾಲ್ದವಾಜ್‌ನಿಂದ ಸುಧಾ ಟಾಕೀಸ್ ನವರೆಗೆ ನಡೆದಿದ್ದ ಬಿಜೆಪಿ ರ್‍ಯಾಲಿ ವೇಳೆಯಲ್ಲಿ ಕೆಲವು ಅಪ್ರಾಪ್ತ ಮಕ್ಕಳನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ(ಟಿಪಿಸಿಸಿ) ಉಪಾಧ್ಯಕ್ಷ ನಿರಂಜನ್ ಎನ್ನುವವರು ತೆಲಂಗಾಣದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದರು.
ನಿರಂಜನ್ ನೀಡಿದ್ದ ದೂರಿನನ್ವಯ ಅಮಿತ್ ಶಾ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ, ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ ಮಾದವಿ ಲತಾ ಸೇರಿದಂತೆ ಒಟ್ಟು ಐವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಇದರಲ್ಲಿ ಅಮಿತ್ ಶಾ, ಜಿ. ಕಿಶನ್ ರೆಡ್ಡಿ ಯಾವುದೇ ಪಾತ್ರವಿಲ್ಲವೆಂದು, ಅವರ ಮೇಲೆ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿದೆ.
ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಉದ್ಧವ್ ಎನ್‌ಡಿಎಗೆ: ಮಹಾ ಶಾಸಕ
ಅಮರಾವತಿ: ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ 15 ದಿನದೊಳಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರುತ್ತಾರೆ ಎಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬದ್ನೇರಾ ಕ್ಷೇತ್ರದ ಶಾಸಕ ರವಿ ರಾಣಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವುತ್ ಇತ್ತೀಚೆಗೆ ಪ್ರಧಾನಿ ಮೋದಿಯ ಕುರಿತು ಮಾತನಾಡುತ್ತಿರುವುದನ್ನು ಗಮನಿಸಿದರೆ ಮೋದಿ ಅಧಿಕಾರ ಸ್ವೀಕರಿಸಿದ 15 ದಿನದೊಳಗೆ ಅವರು ಎನ್‌ಡಿಎ ಮೈತ್ರಿಕೂಟ ಸೇರಿ ಕೇಂದ್ರ ಮಂತ್ರಿಯಾಗುತ್ತಾರೆ. ಅವರಿಗೂ ಇದು ಮೋದಿ ಶಕೆ ಎಂಬುದು ಅರಿವಾಗಿದೆ’ ಎಂದರು.ರವಿ ರಾಣಾ ಅವರ ಪತ್ನಿ ನವನೀತ್ ರಾಣಾ ಹಾಲಿ ಅಮರಾವತಿ ಕ್ಷೇತ್ರದ ಸ್ವತಂತ್ರ ಸಂಸದೆಯಾಗಿದ್ದು, ಈ ಬಾರಿ ಬಿಜೆಪಿ ಉಮೇದುವಾರಿಕೆಯಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದಾರೆ.