ಜೆಡಿಎಸ್ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ತಾಲೂಕಿನ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಹಾಗೂ ಬಿಎಲ್ಎ- 2 ಕಾರ್ಯಾಗಾರ ಕಾರ್ಯಕ್ರಮಕ್ಕೆ ಏ.14ರಂದು ನಿಖಿಲ್ ಕುಮಾರಸ್ವಾಮಿ ಕನಕಪುರಕ್ಕೆ ಆಗಮಿಸಲಿರುವುದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು ತಿಳಿಸಿದರು.

ಕನಕಪುರ: ಜೆಡಿಎಸ್ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ತಾಲೂಕಿನ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಹಾಗೂ ಬಿಎಲ್ಎ- 2 ಕಾರ್ಯಾಗಾರ ಕಾರ್ಯಕ್ರಮಕ್ಕೆ ಏ.14ರಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕನಕಪುರಕ್ಕೆ ಆಗಮಿಸಲಿರುವುದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು ತಿಳಿಸಿದರು.

ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶ

ಭಾನುವಾರ ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ತಾಲೂಕಿನ ಜೆಡಿಎಸ್ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ನಗರದ ಎಸ್.ಆರ್. ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಕ್ಷದ ಯುವ ನಾಯಕ ಹಾಗೂ ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಆಗಮಿಸಲಿರುವುದಾಗಿ ಹೇಳಿದರು.

ಪದಗ್ರಹಣ ಹಾಗೂ ಡಾ. ಅಂಬೇಡ್ಕರ್ ಹುಟ್ಟುಹಬ್ಬ ಸಮಾರಂಭ

ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಅಂದು ಪದಗ್ರಹಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹುಟ್ಟುಹಬ್ಬ ಸಮಾರಂಭ ನಡೆಯಲಿದೆ, ನಂತರ ತಾಲೂಕು ಮಟ್ಟದ ಬಿಎಲ್ಎ 2 ಕಾರ್ಯಾಗಾರ ನಡೆಯಲಿದೆ, ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎ. ಮಂಜುನಾಥ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಮುತ್ತು ಸೇರಿ ಹಲವಾರು ಮುಖಂಡರು, ತಾಲೂಕಿನ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸುವರು ಎಂದು ತಿಳಿಸಿದರು.

ದಿಶಾ ಸಮಿತಿ ಸದಸ್ಯರಾದ ರಾಜೇಶ್, ಶೋಭಾ, ತಾಲೂಕು ಜೆಡಿಎಸ್ ಮಹಿಳಾ ಅಧ್ಯಕ್ಷೆ ಪವಿತ್ರ, ನಲ್ಲಹಳ್ಳಿ ಶಿವಕುಮಾರ್, ಗ್ರಾಪಂ ಮಾಜಿ ಸದಸ್ಯ ಜೈ ರಾಮೇಗೌಡ, ಸ್ಟುಡಿಯೋ ಚಂದ್ರು, ತಾಲೂಕು ಜೆಡಿಎಸ್ ಪಕ್ಷದ ಯುವ ಮುಖಂಡರಾದ ಜವನಮ್ಮನದೊಡ್ಡಿ ತಿಮ್ಮೇಗೌಡ, ಅರಳಾಳು ರಾಜೇಂದ್ರ, ಶಿವನಪ್ಪ ಸೇರಿ ಹಲವು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.