ಹನಿಟ್ರ್ಯಾಪ್‌ ಕೇಸಲ್ಲಿ ಸಾಕ್ಷ್ಯ ಸಿಕ್ಕಿಲ್ಲ: ಪರಂಗೆ ಸಿಐಡಿ ಡಿಜಿಪಿ ವಿವರಣೆ - ವಿಧಾನಸೌಧದಲ್ಲಿ ಗೃಹ ಸಚಿವರ ಭೇಟಿಯಾದ ಸಲೀಂ

| N/A | Published : Apr 05 2025, 12:08 PM IST

Dr G parameshwar
ಹನಿಟ್ರ್ಯಾಪ್‌ ಕೇಸಲ್ಲಿ ಸಾಕ್ಷ್ಯ ಸಿಕ್ಕಿಲ್ಲ: ಪರಂಗೆ ಸಿಐಡಿ ಡಿಜಿಪಿ ವಿವರಣೆ - ವಿಧಾನಸೌಧದಲ್ಲಿ ಗೃಹ ಸಚಿವರ ಭೇಟಿಯಾದ ಸಲೀಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸಹಕಾರ ಮಂತ್ರಿ ಕೆ.ಎನ್‌.ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಡಿಜಿಪಿ ಡಾ.ಎಂ.ಎ.ಸಲೀಂ ಮೌಖಿಕವಾಗಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

  ಬೆಂಗಳೂರು : ರಾಜ್ಯ ಸಹಕಾರ ಮಂತ್ರಿ ಕೆ.ಎನ್‌.ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಡಿಜಿಪಿ ಡಾ.ಎಂ.ಎ.ಸಲೀಂ ಮೌಖಿಕವಾಗಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಶುಕ್ರವಾರ ಭೇಟಿಯಾಗಿ ಈವರೆಗೆ ಹನಿಟ್ರ್ಯಾಪ್ ಯತ್ನ ಪ್ರಕರಣದಲ್ಲಿ ನಡೆದಿರುವ ವಿಚಾರಣೆ ಕುರಿತು ಡಿಜಿಪಿ ವಿವರಣೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಚಾರಣೆಯಲ್ಲಿ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಪೂರಕವಾದ ಯಾವುದೇ ಪೂರಾವೆಗಳು ಲಭ್ಯವಾಗಿಲ್ಲ. ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಸಂದರ್ಶಕರ ಪುಸ್ತಕ ಸಹ ಇರಲಿಲ್ಲ. ಹೀಗಾಗಿ ಡಿಜಿಟಲ್‌ ಸಾಕ್ಷ್ಯಗಳು ಕೂಡ ಪತ್ತೆಯಾಗಿಲ್ಲ ಎಂದು ಡಿಜಿಪಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪ್ರಕರಣ ಸಂಬಂಧ ಸಚಿವ ರಾಜಣ್ಣ ಅವರ ಆಪ್ತ ಸಹಾಯಕ, ವಿಶೇಷಾಧಿಕಾರಿ ಹಾಗೂ ಗನ್ ಮ್ಯಾನ್‌ಗಳನ್ನು ಕೂಡ ವಿಚಾರಣೆ ನಡೆಸಲಾಗಿದೆ. ಆದರೆ ಕೃತ್ಯದ ಬಗ್ಗೆ ತಮಗೇನು ಗೊತ್ತಿಲ್ಲವೆಂದು ಅವರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಚಿವ ರಾಜಣ್ಣ ಅವರ ವಿಚಾರಣೆ ನಡೆಸಬೇಕಿದ್ದು, ಸಚಿವರ ಹೇಳಿಕೆ ಆಧರಿಸಿ ಮುಂದಿನ ವಿಚಾರಣೆ ಮುಂದುವರೆಸಲಾಗುತ್ತದೆ ಎಂದು ಗೃಹ ಮಂತ್ರಿ ಅವರಿಗೆ ಸಲೀಂ ತಿಳಿಸಿರುವುದಾಗಿ ಮೂಲಗಳು ಹೇಳಿವೆ.