ಒಬ್ಬನೇ ಒಬ್ಬ ಶಾಸಕ ಪಾರ್ಟಿ ಬಿಟ್ಟು ಹೋಗಲ್ಲ: ಸಿದ್ದರಾಮಯ್ಯ
KannadaprabhaNewsNetwork | Published : Nov 01 2023, 01:01 AM IST
ಒಬ್ಬನೇ ಒಬ್ಬ ಶಾಸಕ ಪಾರ್ಟಿ ಬಿಟ್ಟು ಹೋಗಲ್ಲ: ಸಿದ್ದರಾಮಯ್ಯ
ಸಾರಾಂಶ
ಒಬ್ಬನೇ ಒಬ್ಬ ಶಾಸಕ ಪಾರ್ಟಿ ಬಿಟ್ಟು ಹೋಗಲ್ಲ: ಸಿದ್ದರಾಮಯ್ಯಬಿಜೆಪಿಯವರು ಸರ್ಕಾರ ಬೆಳೆಸುವ ಕನಸು ಕಾಣುತ್ತಿದ್ದಾರೆ: ಮುಖ್ಯಮಂತ್ರಿ
ಬಿಜೆಪಿಯವರು ಸರ್ಕಾರ ಬೆಳೆಸುವ ಕನಸು ಕಾಣುತ್ತಿದ್ದಾರೆ: ಮುಖ್ಯಮಂತ್ರಿ ಕನ್ನಡಪ್ರಭ ವಾರ್ತೆ ಮಂಡ್ಯ ಒಬ್ಬನೇ ಒಬ್ಬ ಶಾಸಕನೂ ನಮ್ಮ ಪಾರ್ಟಿ ಬಿಟ್ಟು ಹೋಗಲ್ಲ. ಬಿಜೆಪಿ ಅವರು ಸರ್ಕಾರ ಬೀಳಿಸುವ ಕನಸು ಕಾಣ್ತಿದ್ದಾರೆ. ಸರ್ಕಾರ ಬಂದು 4 ತಿಂಗಳಾಯ್ತು, ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಹೇಳಿ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ಆಪರೇಷನ್ ಕಮಲದ ಹೆಸರಿನಲ್ಲಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮ ಪಕ್ಷದ ಯಾವೊಬ್ಬ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರ ಉರುಳಿಸುತ್ತೇವೆ ಎಂಬುದು ಬಿಜೆಪಿಯವರ ಭ್ರಮೆ ಎಂದು ಟೀಕಿಸಿದರು. ಸಿಡಿ ತನಿಖೆಗೆ ಆಗ್ರಹಿಸಿ ಸಿಎಂಗೆ ರಮೇಶ್ ಜಾರಕಿಹೊಳಿ ಬರೆದಿರುವ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಪತ್ರ ಬರೆದ ವಿಚಾರ ನನಗೆ ಗೊತ್ತಿಲ್ಲ, ಪತ್ರ ಬಂದಿಲ್ಲ. ಮಾಧ್ಯಮಗಳಲ್ಲಿ ಹೇಳಿದ ತಕ್ಷಣ ಮಾಡಲು ಆಗಲ್ಲ. ಅವರ ಪತ್ರ ಬಂದರೆ ರಿಪ್ಲೆ ಮಾಡ್ತೀನಿ ಎಂದರು. ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಬರಗಾಲ, ಕುಡಿಯುವ ನೀರು, ವಿದ್ಯುತ್, ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮವಹಿಸಲು ಸೂಚಿಸಿದ್ದೇನೆ. ಒಂದು ವೇಳೆ ಸಮಸ್ಯೆ ಬಂದರೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತದೆ. ಮಂಡ್ಯದಲ್ಲಿ ಕೆಆರ್ ಪೇಟೆಯ ಒಂದು ಹಳ್ಳಿ ಬಿಟ್ಟರೆ ಬೇರೆಲ್ಲೂ ಸಮಸ್ಯೆ ಇಲ್ಲ ಎಂದರು. ಪವರ್ 7 ಗಂಟೆಗೆ ಕೊಡಲು ಹೇಳಿದ್ದೇವೆ, ಅಭಾವ ಇರುವುದರಿಂದ 5 ಗಂಟೆ ನೀಡಲಾಗ್ತಿದೆ. 3 ಶಿಫ್ಟ್‌ಗಳಲ್ಲಿ ತ್ರಿಪೇಸ್ ಕರೆಂಟ್ 5 ಗಂಟೆ ನೀಡಲು ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದರು. ಮಿಮ್ಸ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ವಾಟರ್ ಬಿಲ್ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ. ಅಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿ ಕೆಳಸೇತುವೆ ಕಾಮಗಾರಿ ಪೂರ್ಣ ಮಾಡಲು ಸೂಚಿಸಿದ್ದೇನೆ. ಅಪೂರ್ಣಗೊಂಡ ಮಳವಳ್ಳಿ ಕುಡಿಯುವ ನೀರು ಯೋಜನೆ ಹಸ್ತಾಂತರಿಸಿದ್ದಾರೆ ಎಂದರು. ತಪ್ಪಿತಸ್ಥರ ವಿರುದ್ಧ ಕ್ರಮ, ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕು. 48 ಟಿಎಂಸಿ ನೀರು ಕಾವೇರಿ ಕೊಳ್ಳದ ಜಲಾಶಯದಲ್ಲಿದೆ. 18-20 ಟಿಎಂಸಿ ಬೆಳೆಗಳಿಗೆ ಅವಶ್ಯಕತೆ ಇದೆ. ಕುಡಿಯುವ ನೀರಿಗೆ ಉಳಿಸಿಕೊಂಡು ಬೆಳೆ ರಕ್ಷಣೆ ಮಾಡಲು ಹೇಳಿದ್ದೇನೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಂಶೋಧನೆ ನಡೆಸಲು ಆದೇಶಿಸಲಾಗಿದೆ. ಕೆಲವು ಇಲಾಖೆಗಳು ಸರಿಯಾಗಿ ಕೆಲಸ ಮಾಡ್ತಿಲ್ಲ. ಬದಲಾವಣೆ ಆಗದಿದ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದರು. ಅಲ್ಲದೇ ಕೃಷಿ ಅಧಿಕಾರಿಗಳು ರೈತರ ಜೊತೆ ಸಂಪರ್ಕದಲ್ಲಿದ್ದು ಮಾರ್ಗದರ್ಶನ ನೀಡಬೇಕು ಎಂದರು. ಮಂಡ್ಯಕ್ಕೆ ವಿಶೇಷ ಅನುದಾನ ನಿರೀಕ್ಷೆ ವಿಚಾರವಾಗಿ ಮಾತನಾಡಿದ ಅವರು, ನಾನು ರಿವ್ಯೂ ಮಾಡಲಿಕ್ಕೆ ಬಂದದ್ದು, ಸ್ಪೆಷಲ್ ಪ್ಯಾಕೇಜ್ ಘೋಷಣೆ ಮಾಡಲು ಅಲ್ಲ. ಮಂಡ್ಯದಲ್ಲಿ 1 ಕೋಟಿ 7 ಲಕ್ಷ ಜನರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿದೆ. ರಾಜ್ಯದಲ್ಲಿ ಕೆಲ ಸಮಸ್ಯೆ ಇದೆ, ಬಗೆಹರಿಸಲಾಗುವುದು ಎಂದರು. ಎಕ್ಸ್ಪ್ರೆಸ್ ವೇ ಎಂಟ್ರಿ ಎಕ್ಸಿಟ್ ಕ್ಲೋಸ್ ವಿಚಾರವಾಗಿ ಮಾತನಾಡಿ ಅಗತ್ಯ ಇರುವ ಕಡೆ ಎಂಟ್ರಿ ಎಕ್ಸಿಟ್ ಕೊಡಲು ಹೇಳಿದ್ದೇನೆ. ನಮ್ಮತ್ರ ನೀರಿಲ್ಲ, ಸಿಡಬ್ಲೂಆರ್‌ಎಸ್ ನೀರು ಕೊಡಲು ಹೇಳಿದ್ದಾರೆ. ನಾವು ಹೆಂಗೆ ಕೊಡ್ತೀವಿ ಎಂದು ಹೇಳಲು ಸಾಧ್ಯವಿಲ್ಲ. ರೈತರ ರಕ್ಷಣೆ ನಮ್ಮ ಜವಬ್ದಾರಿಯಾಗಿದೆ. ಪ್ರತಿಭಟನೆ ಕೈ ಬಿಡಲು ಮನವಿ ಮಾಡಲಾಗಿದೆ. ಮುಂದಿನ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ, ನೀರು ಇದ್ದರೆ ಅಲ್ವಾ ಕೊಡಲು ಸಾಧ್ಯ. ಹಿಂಗಾರು ಬೆಳೆ ಹಾಕದಿರಲು ರೈತರಿಗೆ ಹೇಳಿದ್ದೇವೆ. ಬೆಳೆದ ಬೆಳೆಗಳನ್ನು ಉಳಿಸುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.