ಸಾರಾಂಶ
ಲೋಕಸಭೆ ಚುನಾವಣೆಗೆ ಬಿಜೆಪಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಸರಿಸುತ್ತಿಲ್ಲ. ವಿಷಕಾರಿ ಹಾವನ್ನು ನಂಬಬಹುದು ಆದರೆ ಕೇಸರಿಯನ್ನು (ಬಿಜೆಪಿ) ನಂಬುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ
ಕೂಚ್ ಬೆಹಾರ್: ಲೋಕಸಭೆ ಚುನಾವಣೆಗೆ ಬಿಜೆಪಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಸರಿಸುತ್ತಿಲ್ಲ. ವಿಷಕಾರಿ ಹಾವನ್ನು ನಂಬಬಹುದು ಆದರೆ ಕೇಸರಿಯನ್ನು (ಬಿಜೆಪಿ) ನಂಬುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.
ಕೂಚ್ ಬೆಹಾರ್‌ನಲ್ಲಿ ನಡೆದ ರ್‍ಯಾಲಿ ಮಾತನಾಡಿದ ಅವರು, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಿಜೆಪಿ ಆದೇಶದಂತೆ ಕೆಲಸ ಮಾಡುತ್ತಿವೆ. ಚುನಾವಣಾ ಆಯೋಗವು ಇದರ ಬಗ್ಗೆ ಪರಿಶೀಲಿಸಬೇಕು. ವಿಷಕಾರಿ ಹಾವನ್ನು ನಂಬಬಹುದು ಆದರೆ ಬಿಜೆಪಿಯನ್ನು ನಂಬಬೇಡಿ.
ಬಿಜೆಪಿ ದೇಶವನ್ನು ನಾಶ ಮಾಡುವುದಲ್ಲದೆ ಕೇವಲ ಒಂದು ರಾಷ್ಟ್ರ, ಒಂದು ಪಕ್ಷ ಎಂಬ ತತ್ವ ಅನುಸರಿಸುತ್ತದೆ. ಕೇಂದ್ರ ಏಜೆನ್ಸಿ ಬೆದರಿಕೆಗೆ ಟಿಎಂಸಿ ತಲೆಬಾಗುವುದಿಲ್ಲ. ಬಿಎಸ್‌ಎಫ್ ಸ್ಥಳೀಯರನ್ನು ಹಿಂಸೆ ಮಾಡಿದರೆ ಪೊಲೀಸರಿಗೆ ದೂರು ನೀಡಿ ಎಂದು ಹೇಳಿದ್ದಾರೆ.