ಸಾರಾಂಶ
ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಮುಂದುವರಿದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಇದೀಗ ಬಹಿರಂಗವಾಗಿಯೇ ಲಾಬಿ ಆರಂಭಿಸಿದೆ. ಡಿ.ಕೆ.ಶಿವಕುಮಾರ್ ಅವರ 7 ಆಪ್ತ ಶಾಸಕರ ಒಂದು ತಂಡ ಈಗಾಗಲೇ ದೆಹಲಿ
ಬೆಂಗಳೂರು : ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಮುಂದುವರಿದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ಇದೀಗ ಬಹಿರಂಗವಾಗಿಯೇ ಲಾಬಿ ಆರಂಭಿಸಿದೆ. ಡಿ.ಕೆ.ಶಿವಕುಮಾರ್ ಅವರ 7 ಆಪ್ತ ಶಾಸಕರ ಒಂದು ತಂಡ ಈಗಾಗಲೇ ದೆಹಲಿ ತೆರಳಿದ್ದು, ಇನ್ನೊಂದು ತಂಡ ಮಂಗಳವಾರ ರಾಷ್ಟ್ರರಾಜಧಾನಿ ತಲುಪುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ಡಿ.ಕೆ.ಶಿವಕುಮಾರ್ ಆಪ್ತರ 1 ಗುಂಪು ದೆಹಲಿಗೆ
ಮೊದಲ ಹಂತದಲ್ಲಿ ಡಿ.ಕೆ.ಶಿವಕುಮಾರ್ ಆಪ್ತರ 1 ಗುಂಪು ದೆಹಲಿಗೆ ಹೋಗಿದೆ. ಭಾನುವಾರ ತಡರಾತ್ರಿಯೇ ದೆಹಲಿ ತಲುಪಿರುವ ಈ 7 ಶಾಸಕರ ತಂಡದಲ್ಲಿ ಶಾಸಕರಾದ ಎಚ್.ಸಿ. ಬಾಲಕೃಷ್ಣ, ಕದಲೂರು ಉದಯ್, ಶಿವಗಂಗಾ ಬಸವರಾಜು, ಇಕ್ಬಾಲ್ ಹುಸೇನ್, ಮಹೇಂದ್ರ ತಮ್ಮಣ್ಣವರ, ಬಾಬಾ ಸಾಹೇಬ್ ಪಾಟೀಲ್ ಹಾಗೂ ನಯನಾ ಮೋಟಮ್ಮ ಇದ್ದಾರೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ
ಈ ತಂಡ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಪಕ್ಷದಲ್ಲಿನ ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ ಮಂಗಳವಾರ ಮತ್ತೊಂದು ತಂಡ ದೆಹಲಿಗೆ ತೆರಳಲು ಸಜ್ಜಾಗಿದೆ. ತನ್ಮೂಲಕ ಡಿ.ಕೆ.ಶಿವಕುಮಾರ್ ತಂಡ ಶಕ್ತಿ ಪ್ರದರ್ಶನ ಜತೆಗೆ, ನಂಬರ್ ಗೇಮ್ ಸಾಬೀತು ಮೂಲಕ ಅಧಿಕಾರ ಹಸ್ತಾಂತರಕ್ಕೆ ಒತ್ತಡ ಹೇರಲು ಮುಂದಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಗಳು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿವೆ.
- ಬಹಿರಂಗವಾಗಿಯೇ ಡಿಕೆಶಿ ಬಣದ ಲಾಬಿ ಶುರು
- ವರಿಷ್ಠರ ಮುಂದೆ ನೆಚ್ಚಿನ ನಾಯಕನ ಪರ ಪರೇಡ್
- ಸುರ್ಜೇವಾಲಾ ಭೇಟಿಯಾಗಲು ಶಾಸಕರ ಇರಾದೆ
- ಡಿಕೆಶಿ ಸಿಎಂ ಮಾಡಿ ಎಂದು ಈ ವೇಳೆ ಆಗ್ರಹ
;Resize=(690,390))
)
)


;Resize=(128,128))
;Resize=(128,128))
;Resize=(128,128))
;Resize=(128,128))