ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಳ್ಳೆಯ ಆಡಳಿತ ಸಹಿಸಲು ಆಗದೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಳ್ಳೆಯ ಆಡಳಿತ ಸಹಿಸಲು ಆಗದೆ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.
ಮೈಸೂರಿನ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಒಳ್ಳೆಯ ಸರ್ಕಾರ ಸಹಿಸಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಎಂಡಿಎ ವಿಚಾರ ತೆಗೆದುಕೊಂಡಿದ್ದಾರೆ ಎಂದು ಕುಟುಕಿದರು.
ಬಿಜೆಪಿ- ಜೆಡಿಎಸ್ ಅಧಿಕಾರದಲ್ಲಿ ಒಂದೇ ಒಂದು ಮನೆ ಕೊಡಲು ಆಗಿಲ್ಲ. ಏಕೆ ಸಾಧ್ಯವಾಗಿಲ್ಲ? ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. 2013- 2018 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 1,00,366 ಮನೆ ಕೊಡಲಾಗಿದೆ. ಆದರೆ, ಇವರ ಆಡಳಿತ ಅವಧಿಯಲ್ಲಿ 1840 ಮನೆಗಳನ್ನು ಮಾತ್ರ ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು.ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ. ಎಂಡಿಎ ವಿಚಾರದಲ್ಲಿ ಸಿಎಂ ಪಾತ್ರ ಇಲ್ಲ. ಆದರೂ ಅವರ ವಿರುದ್ಧ ಷಡ್ಯಂತ್ರ ನಡೆದಿದೆ. ಸಿಎಂ ಪತ್ನಿ ಹಾಗೂ ಬಾಮೈದ ನಡುವೆ ವ್ಯವಹಾರ ಆಗಿದೆ. ಇದರಲ್ಲಿ ಸಿಎಂ ಪಾತ್ರವೇ ಇಲ್ಲ. ಆದರೂ ರಾಜ್ಯಪಾಲರು ನೋಟೀಸ್ ನೀಡಿದ್ದಾರೆ. ಇದರ ಹಿಂದೆ ಬಿಜೆಪಿ ಕೈವಾಡ ಇದೆ.
- ಎಂ.ಬಿ. ಪಾಟೀಲ್, ಬೃಹತ್ ಕೈಗಾರಿಕೆ ಸಚಿವರು ಬಿಜೆಪಿ- ಜೆಡಿಎಸ್ ಮಾಡಿರುವ ಪಾಪಕ್ಕೆ ಒಂದು ಬಾರಿ ಪಾದಯಾತ್ರೆ ಮಾಡಿದರೆ ಸಾಲದು, ಇಡೀ ರಾಜ್ಯವನ್ನು ಐದು ಬಾರಿ ಪ್ರದಕ್ಷಿಣೆ ಹಾಕಬೇಕು. ಆದರೂ ಜನ ಅವರನ್ನು ನಂಬುವುದಿಲ್ಲ. ಸಿಎಂ ಮೇಲೆ ವಿನಾಕಾರಣ ಆರೋಪ ಹೊರಿಸಿದ್ದಾರೆ. ಅವರ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ.
- ಕೆ.ಜೆ.ಜಾರ್ಜ್, ಇಂಧನ ಸಚಿವರು