ಸಾರಾಂಶ
ಗುರುದಾಸಪುರ:‘ ಅಂದು ಕಾಂಗ್ರೆಸ್ ಸಿಖ್ ವಿರೋಧಿ ದಂಗೆಯಲ್ಲಿ ಗಲಭೆಕೋರರನ್ನು ಉಳಿಸಿ, ಶಿಕ್ಷೆಯಾಗುವುದನ್ನು ತಪ್ಪಿಸಿತ್ತು’ ಎಂದು ಕಾಂಗ್ರೆಸ್ ವಿರುದ್ಧ 1984ರ ಸಿಖ್ ವಿರೋಧಿ ದಂಗೆ ವಿಚಾರ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಪಂಜಾಬ್ ಸಿಎಂ ವಿರುದ್ಧ ಗುಡುಗಿರುವ ಪ್ರಧಾನಿ, ‘ಭಗವಂತ್ ಮಾನ್‌ಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವಿಲ್ಲ’ ಎಂದಿದ್ದಾರೆ.
ಪಂಜಾಬ್‌ನ ಗುರುದಾಸಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪ್ರಧಾನಿ, ‘ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ಅಪರಾಧಿಗಳನ್ನು ರಕ್ಷಿಸಿ, ಶಿಕ್ಷೆಯಾಗುವುದನ್ನು ತಪ್ಪಿಸಿತ್ತು. ಆದರೆ ಸಿಖ್ ವಿರೋಧಿ ದಂಗೆಯ ಕಡತಗಳನ್ನು ತೆರೆದಿದ್ದು ಮೋದಿ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತರಿ ಪಡಿಸಿದ್ದು ಮೋದಿ.’ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ವಿರುದ್ಧವೂ ಹರಿಹಾಯ್ದಿರುವ ಪ್ರಧಾನಿ ‘ಭಗವಂತ್ ಮಾನ್ ತನ್ನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ದೆಹಲಿಯ ತಿಹಾರ್ ಜೈಲಿಗೆ ಹೋಗಬೇಕಾಗಿದೆ.
ಅವರು ತಮ್ಮ ರಿಪೋರ್ಟ್ ಕಾರ್ಡ್‌ಗಳನ್ನು ಅವರಿಗೆ (ಕೇಜ್ರಿವಾಲ್) ಪ್ರಸ್ತುತ ಪಡಿಸಬೇಕಾಗಿದೆ. ದೆಹಲಿ ಕೆ ದರ್ಬಾರಿ ಪಂಜಾಬ್‌ನ್ನು ನಡೆಸುತ್ತಿದೆ. ಅವರ ಮಾಲೀಕ (ಅರವಿಂದ್ ಕೇಜ್ರಿವಾಲ್) ಜೈಲಿಗೆ ಹೋದರು ಮತ್ತು ಪಂಜಾಬ್ ಸರ್ಕಾರವನ್ನು ಮುಚ್ಚಲು ಪ್ರಾರಂಭಿಸಿದರು’ ಎಂದು ಆರೋಪಿಸಿದರು.