ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇಡೀ ಸಂಪತ್ತನ್ನು ನಾಲ್ಕೈದು ಮಂದಿ ಸಿರಿವಂತರಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ರಾಯ್‌ಬರೇಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇಡೀ ಸಂಪತ್ತನ್ನು ನಾಲ್ಕೈದು ಮಂದಿ ಸಿರಿವಂತರಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಇಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಖಾಸಗೀಕರಣ ದೇಶದ ಅಭಿವೃದ್ಧಿಗೆ ಉತ್ತಮವಾದದ್ದು. ಆದರೆ ಒಬ್ಬ ಪ್ರಧಾನಿ ದೇಶದ ಸಂಪೂರ್ಣ ಸಂಪತ್ತನ್ನು ನಾಲ್ಕೈದು ಶ್ರೀಮಂತರಿಗೆ ನೀಡುತ್ತಿರುವುದು ಸರಿಯಲ್ಲ.
ಇಂದು ಭಾರತದ ಕಲ್ಲಿದ್ದಲು, ವಿದ್ಯುತ್ ತಯಾರಿಕೆ, ಬಂದರು, ವಿಮಾನನಿಲ್ದಾಣಗಳು ಎಲ್ಲವನ್ನೂ ಇವರ ಸ್ನೇತರಿಗೆ ಹಂಚಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರು ಎರಡು ಭಾರಿ ವಾರಣಾಸಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಒಂದು ದಿನವೂ ಅಲ್ಲಿಯ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಬದುಕು ಹೇಗಿದೆ ಎಂಬುದನ್ನು ನೋಡಿಲ್ಲ ಎಂದರು.