ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ನ.28ರಂದು ಶ್ರೀಕೃಷ್ಣ ಕ್ಷೇತ್ರ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಂದು ಅವರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯೋತ್ಸವದ ಆರಂಭದಲ್ಲಿ ಸಂಕಲ್ಪಿಸಿದ್ದ ಕೋಟಿ ಗೀತಾ ಲೇಖನ ಯಜ್ಞ ಮಂಗಲೋತ್ಸವ ಹಾಗೂ ಬೃಹತ್ ಗೀತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಡುಪಿ : ಪ್ರಧಾನಿ ನರೇಂದ್ರ ಮೋದಿ ನ.28ರಂದು ಶ್ರೀಕೃಷ್ಣ ಕ್ಷೇತ್ರ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಂದು ಅವರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯೋತ್ಸವದ ಆರಂಭದಲ್ಲಿ ಸಂಕಲ್ಪಿಸಿದ್ದ ಕೋಟಿ ಗೀತಾ ಲೇಖನ ಯಜ್ಞ ಮಂಗಲೋತ್ಸವ ಹಾಗೂ ಬೃಹತ್ ಗೀತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಕೃಷ್ಣನ ದರ್ಶನವನನ್ನೂ ಮಾಡಲಿದ್ದಾರೆ.
ಕೋಟಿ ಗೀತಾ ಯಜ್ಞ ಮಹಾಕಾರ್ಯಪ್ರಶಂಸಿರುವ ಪ್ರಧಾನಿ
ತಮ್ಮ ಈ ಕೋಟಿ ಗೀತಾ ಯಜ್ಞ ಮಹಾಕಾರ್ಯವನ್ನು ಪತ್ರ ಬರೆದು ಪ್ರಶಂಸಿರುವ ಪ್ರಧಾನಿ ಮೋದಿ ಅವರನ್ನು ಶ್ರೀಗಳು ಕೃಷ್ಣಮಠಕ್ಕೆ ಆಹ್ವಾನಿಸಿದ್ದರು. ಅದರಂತೆ ಈಗ ಗೀತೋತ್ಸವದಲ್ಲಿ ಭಾಗವಹಿಸಲು ಮೋದಿ ಅವರು ಒಪ್ಪಿದ್ದು, ನ.28ರಂದು ಅವರು ಮಧ್ಯಾಹ್ನ 12ರಿಂದ 2 ಗಂಟೆಯ ನಡುವೆ ಆಗಮಿಸಿ ಗೀತೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಉಡುಪಿ ಕೃಷ್ಣಮಠಕ್ಕೆ ಮೋದಿ ಅವರ ಇದು 2ನೇ ಭೇಟಿ
ಉಡುಪಿ ಕೃಷ್ಣಮಠಕ್ಕೆ ಮೋದಿ ಅವರ ಇದು 2ನೇ ಭೇಟಿಯಾಗಿದೆ. 2009ರಲ್ಲಿ ಇದೇ ಪುತ್ತಿಗೆ ಶ್ರೀಪಾದರ ತೃತೀಯ ಪರ್ಯಾಯೋತ್ಸವದಲ್ಲಿ ಮೋದಿ ಅವರು ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ಆಗ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))