ಕಾಂಗ್ರೆಸ್‌ ಹಾಗಲಕಾಯಿ, ಯಾವತ್ತೂ ಕಹಿ: ಮೋದಿ

| Published : Apr 09 2024, 12:47 AM IST / Updated: Apr 09 2024, 03:47 AM IST

ಕಾಂಗ್ರೆಸ್‌ ಹಾಗಲಕಾಯಿ, ಯಾವತ್ತೂ ಕಹಿ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅನ್ನು ಹಾಗಲಕಾಯಿಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ತುಪ್ಪದಲ್ಲಿ ಕರಿದರೂ, ಸಕ್ಕರೆ ಬೆರೆಸಿದರೂ ಅದರ ರುಚಿ ಬದಲಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ದೇಶದ ಎಲ್ಲ ಸಮಸ್ಯೆಗಳಿಗೂ ಆ ಪಕ್ಷವೇ ಮೂಲ ಎಂದು ಪ್ರತಿಪಾದಿಸಿದ್ದಾರೆ.

ಚಂದ್ರಾಪುರ: ಕಾಂಗ್ರೆಸ್ ಅನ್ನು ಹಾಗಲಕಾಯಿಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ತುಪ್ಪದಲ್ಲಿ ಕರಿದರೂ, ಸಕ್ಕರೆ ಬೆರೆಸಿದರೂ ಅದರ ರುಚಿ ಬದಲಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ದೇಶದ ಎಲ್ಲ ಸಮಸ್ಯೆಗಳಿಗೂ ಆ ಪಕ್ಷವೇ ಮೂಲ ಎಂದು ಪ್ರತಿಪಾದಿಸಿದ್ದಾರೆ.

ಸೋಮವಾರ ಮಹಾರಾಷ್ಟ್ರದಲ್ಲಿ ಮೊದಲ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಮೂಲ, ಧರ್ಮ, ಕಾಶ್ಮೀರ (ಸಮಸ್ಯೆ), ನಕ್ಸಲಿಸಂ ಆಧಾರದ ಮೇಲೆ ದೇಶ ವಿಭಜನೆಗೆ ಯಾರು ಕಾರಣ? ರಾಮ ಮಂದಿರ ನಿರ್ಮಾಣ ವಿರೋಧಿಸಿದವರು ಮತ್ತು ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರು ಯಾರು? ರಾಮ ಮಂದಿರ (ಉದ್ಘಾಟನೆ) ಆಮಂತ್ರಣ ನಿರಾಕರಿಸಿದವರು ಯಾರು?’ ಎಂದು ಕೇಳಿದರು.

ಲೋಕಸಭೆ ಚುನಾವಣೆ ಸ್ಥಿರತೆ ಮತ್ತು ಅಸ್ಥಿರತೆಯ ನಡುವಿನ ಹೋರಾಟವಾಗಿದೆ ಎಂದ ಅವರು, ಪ್ರತಿಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು ಅಧಿಕಾರವನ್ನು ಬಯಸುತ್ತಿವೆ ಎಂದು 2019 ರಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಲೋಕಸಭಾ ಕ್ಷೇತ್ರವಾದ ಚಂದ್ರಾಪುರದಲ್ಲಿ ಆರೋಪಿಸಿದರು.