ಕಳಪೆ ಗುಣಮಟ್ಟದ ಅಕ್ಕಿ ನೀಡಿಲ್ಲ : ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ

| Published : Jul 22 2024, 01:22 AM IST / Updated: Jul 22 2024, 04:45 AM IST

KH Muniyappa

ಸಾರಾಂಶ

ವಾಲ್ಮೀಕಿ ನಿಗಮ ಹಗರಣದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ವಿಚಾರವು ತನಿಖಾ ಹಂತದಲ್ಲಿದೆ. ಪೂರ್ಣಗೊಳ್ಳುವವರೆಗೂ ಮಾತನಾಡುವುದು ತಪ್ಪು, ಹಣ ಯಾರು ತೆಗೆದುಕೊಂಡು ಹೋಗಿದ್ದಾರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು

 ಕೋಲಾರ : ಶಾಲೆಗಳಿಗೆ ಗುಣಮಟ್ಟದ ಅಕ್ಕಿ ನೀಡುವ ಬಗ್ಗೆ ಸಚಿವರೊಂದಿಗೆ ಹಾಗೂ ಸದನದಲ್ಲಿಯೂ ಚರ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಅಕ್ಕಿ ನೀಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಗುರು ಪೂರ್ಣಿಮೆ ಪ್ರಯುಕ್ತ ನಗರದ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆಗಳಿಗೆ ಕಡಿಮೆ ಗುಣಮಟ್ಟದ ಅಕ್ಕಿ ಪೂರೈಸಲಾಗುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ದೂರು ಕೊಟ್ಟವರನ್ನೇ ಕೇಳಿ

ಕೋಲಾರದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ವಿಚಾರವಾಗಿ ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ದೂರು ನೀಡಿದ್ದಾರೆಯೋ ಅವರನ್ನೇ ಕೇಳಿ. ನನಗೆ ಏನು ಗೊತ್ತಿಲ್ಲ ಎಂದು ಮಾಧ್ಯಮದವರಿಗೆ ಉತ್ತರಿಸಿದರು.ವಿಧಾನಸಭೆ ಇರುವುದು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. 

ಅದನ್ನು ಬಿಟ್ಟು ವಿನಾಕಾರಣ ಬೇರೆ ಬೇರೆ ಚರ್ಚೆಗಳಲ್ಲಿ ತೊಡಗುವುದು ಸರಿಯಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆಸಿಎಂ ಸಿದ್ದರಾಮಯ್ಯ ಸರಕಾರಕ್ಕೆ 40 ಕೋಟಿ ರೂ. ವಂಚನೆ ಮಾಡಿರುವ ಆರೋಪವು ರಾಜಕೀಯ ಪಿತೂರಿಯಾಗಿದ್ದು, ಸಿಎಂ ಅಂತಹ ಕೆಲಸ ಮಾಡಿಲ್ಲ, ೮೭ ಕೋಟಿ ಹಗರಣದಲ್ಲಿ ೪೦ ಕೋಟಿರೂ ಜಮಾ ಆಗಿದೆ. ಎಲ್ಲವನ್ನೂ ವಾಪಸ್ ಪಡೆಯಲು ಸರ್ಕಾರ ಕ್ರಮಕೈಗೊಂಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ವಿಚಾರವು ತನಿಖಾ ಹಂತದಲ್ಲಿದೆ. ಪೂರ್ಣಗೊಳ್ಳುವವರೆಗೂ ಮಾತನಾಡುವುದು ತಪ್ಪು, ಹಣ ಯಾರು ತೆಗೆದುಕೊಂಡು ಹೋಗಿದ್ದಾರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಮುಖಂಡರಾದ ಓಬಿಸಿ ಮಂಜುನಾಥ್, ಗಂಗಮ್ಮಪಾಳ್ಯ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಚಿಟ್ಟಿ ರಘು ಇದ್ದರು.