ವಾರಾಣಸಿ ಕ್ಷೇತ್ರ: ಮೇ 14ಕ್ಕೆ ಮೋದಿ ನಾಮಪತ್ರ

| Published : May 04 2024, 12:32 AM IST / Updated: May 04 2024, 04:26 AM IST

ಸಾರಾಂಶ

ಲೋಕಸಭೆ ಚುನಾವಣೆಯ ಕೊನೆಯ ಚರಣವಾದ ಜೂ.1ರಂದು ಮತದಾನ ನಡೆಯಲಿರುವ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮೇ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ವಾರಾಣಸಿ: ಲೋಕಸಭೆ ಚುನಾವಣೆಯ ಕೊನೆಯ ಚರಣವಾದ ಜೂ.1ರಂದು ಮತದಾನ ನಡೆಯಲಿರುವ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮೇ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಸತತ 3ನೇ ಬಾರಿಗೆ ಅವರು ಕಾಶಿಯಿಂದ ಸ್ಪರ್ಧಿಸುತ್ತಿದ್ದಾರೆ.

ನಾಮಪತ್ರಕ್ಕೂ ಮುನ್ನ ಮೇ 13 ರಂದು ವಾರಣಾಸಿಯಲ್ಲಿ ಭವ್ಯವಾದ ರೋಡ್‌ಶೋ ಆಯೋಜಿಸಲಾಗಿದೆ. ಅಲ್ಲಿ ಪ್ರಧಾನಿ ಮೋದಿ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ. ಇನ್ನು ಮರುದಿನ 14ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ನಾಮಪತ್ರ ಸಲ್ಲಿಸಿದ ನಂತರ ಅವರು ಕಾಶಿ ವಿಶ್ವನಾಥ ಮಂದಿರ ಹಾಗೂ ಕಾಲಭೈರವ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ ಎಂದು ಗೊತ್ತಾಗಿದೆ.

2014 ಹಾಗೂ 2019ರಲ್ಲಿ ಸತತವಾಗಿ ಮೋದಿ ವಾರಾಣಸಿಯಲ್ಲಿ ಗೆದ್ದಿದ್ದರು.