ಸಾರಾಂಶ
ಕೆಜಿಎಫ್ : ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಹಾಗೂ ರೂಪಕಲಾ ಶಶಿಧರ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ನಾವು ಅತ್ಯಧಿಕ ಮತಗಳನ್ನು ಪಡೆಯುವುದಾಗಿ ಕೋಲಾರ ಲೋಕಾಸಭಾ ಕ್ಷೇತ್ರದ ಅಭ್ಯರ್ಥಿ ಕೆ.ವಿ.ಗೌತಮ್ ತಿಳಿಸಿದರು.ಕೆಜಿಎಫ್‌ನ ಎನ್.ಜಿ.ಹುಲ್ಕೂರು ಗ್ರಾಪಂ, ವ್ಯಾಪ್ತಿಯ ಕದಿರಗಾನಕುಪ್ಪದ ಅಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಎನ್.ಜಿ. ಹುಲ್ಲೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನೇತ್ರವತಿ ಯೋಜನೆ ಜಾರಿ
ಮೇಡಂ ಇರುವ ತನಕ ಕೆಜಿಎಫ್ ತಾಲೂಕು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿದೆ, ಕೆಜಿಎಫ್ ಕ್ಷೇತ್ರದಲ್ಲಿ ನೂರಾರು ಕೋಟಿ ರೂ.ಗಳ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ಜನರು ಅಭಿವೃದ್ದಿಗೆ ಮತವನ್ನು ನೀಡಲಿದ್ದಾರೆ. ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೇತ್ರವತಿ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಯ ಜನರಿಗೆ ಕುಡಿವ ನೀರು, ರೈತರು ಬೆಳೆ ಬೆಳೆಯಲು ನೀರು ಕೊಡುವುದಾಗಿ ಭರವಸೆ ನಿಡಿದರು.
ಜಿಲ್ಲೆಯಲ್ಲಿ ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡಲು ಕೆಜಿಎಫ್ ತಾಲೂಕಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲಾಗುವುದು, ಕೇಂದ್ರ-ರಾಜ್ಯ ಸರಕಾರದ ಯೋಜನೆಗಳನ್ನು ತಂದು ಕೋಲಾರ ಜಿಲ್ಲೆಯನ್ನು ಅಭಿವೃದ್ದಿ ಮಾಡಲಾಗುವುದೆಂದು. ಬೆಂಗಳೂರು ಕೋಲಾರ ಜಿಲ್ಲೆಗೆ ಹೊಂದಿಕೊಂಡಿದೆ, ಬೆಂಗಳೂರಿನಿಂದ ಕೋಲಾರಕ್ಕೆ 60 ಕಿ.ಮೀ ದೂರವಿದೆ ಅಷ್ಟೇ ನಾನು ಹೇಗೆ ಹೊರಗಿನವರು ಎಂದು ಪ್ರಶ್ನೆ ಮಾಡಿದರು
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಿನಿಂದ ಚುನಾವಣೆ ಮಾಡುತ್ತವೇ, ನಮ್ಮ ಭಿನ್ನಮತವಿಲ್ಲ ಗುರುವಾರ ಎಲ್ಲರೂ ಒಟ್ಟಿಗೆ ಸೇರಿಕೊಂಡು ನಾಮಪತ್ರ ಸಲ್ಲಿಸಿದ್ದೇವೆ, ಕಳೆದ ಸಾರಿ ಕೋಲಾರನ್ನು ಕಳೆದುಕೊಂಡಿದ್ದೇವೆ ಈ ಬಾರಿ ಒಗ್ಗಟ್ಟಿನ ಬಲದಿಂದ ಕೋಲಾರ ಕ್ಷೇತ್ರವನ್ನು ಪಡೆದುಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ ಕಾಂಗ್ರೆಸ್ ಪಕ್ಷ ತಾಯಿ ಪಕ್ಷವಾಗಿದ್ದು, ಸ್ವತಂತ್ರ್ಯ ಪೂರ್ವದಲ್ಲಿ ಅನೇಕ ಹಿರಿಯರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಿಸಿದ್ದಾರೆ, ಕಾಂಗ್ರೆಸ್ ಪಕ್ಷವು ಸಮುದ್ರವಿದ್ದಂತೆ ಪಕ್ಷವು ದೇಶದ ಲಕ್ಷಾಂತರ ಬಡ ಬಗ್ಗರು, ದಿನದಲಿತರಿಗೆ ಅನೇಕ ಕಾರ್‍ಯಕ್ರಮಗಳನ್ನು ನೀಡಿ ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರು. ಪಕ್ಷದ ಹಿರಿಯ ಮುಖಂಡರು, ಪಕ್ಷದ ನಿಷ್ಟಾವಂತ ಕಾರ್‍ಯರ್ತರು ಕಾಂಗ್ರೆಸ್ ಪಕ್ಷದ ಅಸ್ತಿ, ಮುಖಂಡರು ಪಕ್ಷ ಬಲವರ್ಧನೆ ಮಾಡಲು ನಿಮ್ಮ ಸಲಹೆ ಸೂಚನೆಗಳನ್ನು ನೀಡಿ, ಕಾಂಗ್ರೆಸ್ ಪಕ್ಷ ಎಲ್ಲಿಯೂ ತಲೆಬಾಗಬಾರದು, ಪಕ್ಷ ನಮಗೆ ತಾಯಿ ಇದ್ದಂತೆ, ಪಕ್ಷ ಸೋತರೆ ತಾಯಿಗೆ ಅವಮಾನವಾದಂತೆ, ಪಕ್ಷ ನಮಗೆ ಒಂದು ಅವಕಾಶ ಕೊಟ್ಟಿದೆ ಎಲ್ಲರೂ ಪಕ್ಷವನ್ನು ಬಲಪಡಿಸಿ ಅತ್ಯದಿಕ ಮತಗಳನ್ನು ಕೊಡಿಸುವ ಮೂಲಕ ರಾಜ್ಯದ ಮುಖಂಡರು ಕೆಜಿಎಫ್ ಕ್ಷೇತ್ರದ ಬಗ್ಗೆ ವಿಶೇಷ ಗೌರವ ನೀಡಿ ಮಾತನಾಡಬೇಕು ಎಂದರು.
ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ
ನಮ್ಮಲ್ಲಿ ಯಾವುದೇ ಬಿನ್ನಭಿಪ್ರಾಯಗಳು ಇಲ್ಲ, ಕಾರ್‍ಯಕರ್ತರು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ ಚುನಾವಣೆಯನ್ನು ಗೆಲ್ಲಿಸಿಕೊಂಡು ಬರಬೇಕೆಂದು ಶಾಸಕರು ತಿಳಿಸಿದರು.
ಕೋಮಲ್‌ನ ನಿದೆರ್ಶೇಕ ಜಯಸಿಂಹಕೃಷ್ಣಪ್ಪ, ಜಿಪಂ ಮಾಜಿ ಅಧ್ಯಕ್ಷ ಅ.ಮು.ಲಕ್ಷ್ಮೀನಾರಾಯಣ್, ಗ್ರಾ.ಪಂ ಅಧ್ಯಕ್ಷೆ ವಿನೂಕಾ ಅರ್ತಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಕೃಷ್ಣರೆಡ್ಡಿ, ವೆಂಕಟಕೃಷ್ಣಾರೆಡ್ಡಿ, ಕಾರಿ ಪ್ರಸನ್ನ, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷರಾದ ನಾಗರಾಜ್, ಯರ್ರನಾಗನಹಳ್ಳಿಯ ವಿಜಯರಾಘವರೆಡ್ಡಿ, ರಾಮಚಂದ್ರ, ಅಪ್ಪಿರೆಡ್ಡಿ, ಪದ್ಮನಾಭರೆಡ್ಡಿ, ಎಂಬಿಎ ಕೃಷ್ಣಪ್ಪ, ದುರ್ಗಾಪ್ರಸಾದ್ ಇದ್ದರು.