ಸಾರಾಂಶ
ಬಿಜೆಪಿ ಯಾವಾಗಲೂ ನಮ್ಮಂತಹವರನ್ನು ಇಟ್ಟುಕೊಂಡೇ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಬಂಡವಾಳ ನನಗೆ ಗೊತ್ತಿದೆ. ನಾನು ಬಾಯಿ ಬಿಟ್ಟರೆ ಬಿಜೆಪಿಯ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ನ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್: ಬಿಜೆಪಿ ಯಾವಾಗಲೂ ನಮ್ಮಂತಹವರನ್ನು ಇಟ್ಟುಕೊಂಡೇ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಬಂಡವಾಳ ನನಗೆ ಗೊತ್ತಿದೆ. ನಾನು ಬಾಯಿ ಬಿಟ್ಟರೆ ಬಿಜೆಪಿಯ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ನ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮ ಅಕ್ರಮದ ಚರ್ಚೆ ವೇಳೆ ಬಿಜೆಪಿ ಸದಸ್ಯರ ಆರೋಪಕ್ಕೆ ಪ್ರತಿಯಾಗಿ ಮಾತನಾಡುತ್ತಿದ್ದ ಪುಟ್ಟಣ್ಣ ಅವರನ್ನು ಉದ್ದೇಶಿಸಿ ಬಿಜೆಪಿಯ ರವಿಕುಮಾರ್, ನೀವು ಎಷ್ಟೇ ಮಾತನಾಡಿದರೂ ಸಚಿವರಾಗುವುದಿಲ್ಲ ಎಂದರು. ಅದರಿಂದ ಮತ್ತಷ್ಟು ಸಿಟ್ಟಾದ ಪುಟ್ಟಣ್ಣ, ಬಿಜೆಪಿಯಲ್ಲಿನ ಪರಿಸ್ಥಿತಿಯೂ ನನಗೆ ಗೊತ್ತಿದೆ. ಅಲ್ಲಿರಲಾಗದೆಯೇ ನಾನು ಕಾಂಗ್ರೆಸ್‌ಗೆ ಬಂದಿದ್ದೇನೆ. ನಾನು ಬಿಜೆಪಿಯಲ್ಲಿ ನೋಡಿದ್ದೆಲ್ಲವನ್ನೂ ಹೇಳಿದರೆ ನೀವ್ಯಾರೂ ಇಲ್ಲಿರುವುದಿಲ್ಲ. ನಾನು ಬಾಯಿ ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.ಬಿಜೆಪಿ ಯಾವತ್ತೂ ಸ್ವಂತವಾಗಿ ಅಧಿಕಾರಕ್ಕೆ ಬಂದಿಲ್ಲ. ನಮ್ಮಂತಹವರನ್ನು ಇಟ್ಟುಕೊಂಡೇ ಅಧಿಕಾರಕ್ಕೆ ಬಂದಿದ್ದು. ಇನ್ನುಮುಂದೆ ನೀವು ಅಧಿಕಾರಕ್ಕೆ ಬರುವುದಿಲ್ಲ ಬಿಡಿ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಭಾರತಿ ಶೆಟ್ಟಿ, ಎಲ್ಲ ಪಕ್ಷಗಳು ನಿಮ್ಮ ಪಾಲಿಗೆ ಮುಗಿದಿವೆ. ಕಾಂಗ್ರೆಸ್‌ನಿಂದ ಬೇರೆಲ್ಲಿಗೂ ಹೋಗಲಾಗುವುದಿಲ್ಲ. ಹೀಗಾಗಿ ಮಾತನಾಡುತ್ತಿದ್ದೀರಿ ಎಂದರು. ಆಗ ಪುಟ್ಟಣ್ಣ, ನಾನು ಯಾರಿಗೂ ಬಕೆಟ್ ಹಿಡಿದು ಬಂದವನಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದ ಬಂದವನು. ಅದನ್ನು ತಿಳಿದುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದರು.