ಸಾರಾಂಶ
ಜೈಪುರ: ಪಿಎಂ ಎಂದರೆ ಪನೌತಿ (ಅಪಶಕುನ/ದುರಾದೃಷ್ಟ) ಮೋದಿ ಎಂದರ್ಥ. ಪ್ರಧಾನಿ ನರೇಂದ್ರ ಮೋದಿ ದುರಾದೃಷ್ಟವನ್ನು ತರುತ್ತಾರೆ’ ಎಂದು ವಿಶ್ವಕಪ್ ಅಂತಿಮ ಪಂದ್ಯವನ್ನು ಮೋದಿ ನೋಡಲು ಹೋದಾಗ ಭಾರತ ಸೋತಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.ರಾಜಸ್ಥಾನದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು ‘ಪ್ರಧಾನಿ ಮೋದಿ ಟೀವಿಯಲ್ಲಿ ಹಿಂದೂ- ಮುಸ್ಲಿಂ ಎಂಬ ಐಕ್ಯತೆಯ ಮಂತ್ರ ಜಪಿಸುತ್ತಾರೆ. ಮತ್ತೆ ಕೆಲವೊಮ್ಮೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋಗುತ್ತಾರೆ. ಪಂದ್ಯ ಸೋಲುವುದು ಬೇರೆ ವಿಚಾರ. ಆದರೆ ಇದಕ್ಕೆ ಕಾರಣ ಪನೌತಿ (ಅಪಶಕುನ). ಪಿಎಂ (ಪ್ರೈಮ್ ಮಿನಿಸ್ಟರ್) ಎಂದರೆ ಪನೌತಿ (ಅಪಶಕುನ) ಮೋದಿ’ ಎಂದು ನಗುನಗುತ್ತಲೇ ವ್ಯಂಗ್ಯವಾಡಿದರು.ಆಗ ಅವರ ಭಾಷಣ ಕೇಳಲು ನೆರೆದಿದ್ದ ಅನೇಕ ಸಭಿಕರು ಗಹಗಹಿಸಿ ನಕ್ಕರು.ಮೋದಿ ಡ್ರಾಮಾ ಕಿಂಗ್- ಜೈರಾಂ ರಮೇಶ್:ಇನ್ನು ವಿಶ್ವಕಪ್ ಫೈನಲ್ ಪಂದ್ಯವನ್ನು ಸೋತಿದ್ದ ಭಾರತ ಕ್ರಿಕೆಟ್ ತಂಡದ ಸದಸ್ಯರನ್ನು ಅವರ ಡ್ರೆಸ್ಸಿಂಗ್ ರೂಂಗೆ ಹೋಗಿ ಸಂತೈಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಮಾಸ್ಟರ್ ಆಫ್ ಡ್ರಾಮಾ ಇನ್ ಇಂಡಿಯಾ’ (ಭಾರತದ ಮಹಾನ್ ನಾಟಕಕಾರ) ಎಂದಿದ್ದಾರೆ. ಮೋದಿ ಆಟಗಾರರನ್ನು ಸಂತೈಸಿದ ವೈರಲ್ ವಿಡಿಯೋ ಕುರಿತು ಟ್ವೀಟ್ ಮಾಡಿರುವ ಅವರು ‘ಭಾರತದ ಡ್ರಾಮಾ ಮಾಸ್ಟರ್ ಸ್ವಯಂ ಸಂಯೋಜನೆಯ ಸಾಂತ್ವನದ ನಾಟಕದ ವಿಡಿಯೋ ಮತ್ತು ಬಿಡುಗಡೆಯಾಗಿರುವ ಚಿತ್ರಗಳು ಕಪಟವನ್ನು ಬಹಿರಂಗಪಡಿಸಿವೆ. ತನ್ನನ್ನು ಕಾಪಾಡಿಕೊಳ್ಳುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇಂತಹ ಹತಾಶೆಯ ನಾಟಕಕ್ಕೆ ಭಾರತದ ಯುವಕರು ಮೋಹ ಹೋಗುವುದಿಲ್ಲ’ ಎಂದಿದ್ದಾರೆ.ರಾಹುಲ್ ಕ್ಷಮೆ ಕೇಳಲಿ: ಬಿಜೆಪಿ ಆಗ್ರಹಇದು ನಾಚಿಕೆಗೇಡಿನ, ಮಾನಸಿಕ ಅಸ್ಥಿರತೆಯ ಹೇಳಿಕೆ: ಬಿಜೆಪಿ ತೀವ್ರ ಆಕ್ರೋಶನವದೆಹಲಿ: ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಅಪಶಕುನ ಈ ಹೇಳಿಕೆ ತೀವ್ರ ವಿವಾದಕ್ಕೀಡಾಗಿದ್ದು ಇವು ನಾಚಿಕೆಗೇಡಿನ, ಮಾನಸಿಕ ಅಸ್ಥಿರತೆಯ ಹೇಳಿಕೆಗಳುಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ಷಮೆ ಕೇಳಲು ಆಗ್ರಹಿಸಿದ್ದಾರೆ.ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ಇದು ನಾಚಿಕೆಗೇಡಿನ, ಖಂಡನೀಯ ಮತ್ತು ಅವಮಾನಕರ ಹೇಳಿಕೆ. ರಾಹುಲ್ ಬೇಕಾಬಿಟ್ಟಿನಾಲಿಗೆ ಹರಿಬಿಟ್ಟಿದ್ದಾರೆ’ ಎಂದು ಕಿಡಿಕಾರಿದ್ದಾರೆ,ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಪ್ರತಿಕ್ರಿಯಿಸಿ, ‘ಈ ಹೇಳಿಕೆಗಳು ಹತಾಶೆ ಮತ್ತು ಮಾನಸಿಕ ಅಸ್ಥಿರತೆಯ ಸಂಕೇತಗಳಾಗಿವೆ. ಮೋದಿ ಅವರು ಕಾಂಗ್ರೆಸ್‌ನ ಮೋಸಗಾರರಿಗೆ, ಭಾರತದ ಶತ್ರುಗಳು ಮತ್ತು ಭಯೋತ್ಪಾದಕರಿಗೆ ದುಃಸ್ವಪ್ನವಾಗಿದ್ದಾರೆ. ಹೀಗಾಗಿ ಇದನ್ನು ಸಹಿಸದೇ ಇಂಥ ಹೇಳಿಕೆ ಬಂದಿದೆ’ ಎಂದಿದ್ದಾರೆ.‘ರಾಹುಲ್ ಗಾಂಧಿ ಅವರು 55 ವರ್ಷ ವಯಸ್ಸಿನವರು, ಅವರು ತಮ್ಮ ಜೀವನದಲ್ಲಿ ಒಂದು ದಿನವೂ ಕೆಲಸ ಮಾಡಿಲ್ಲ, ಅವರ ಕುಟುಂಬವು ದೇಶವನ್ನು ಪರಾವಲಂಬಿಗಳಂತೆ ಶೋಷಿಸಿದೆ. ಅವರ ಸರ್ಕಾರ ದೇಶವನ್ನು ಆರ್ಥಿಕವಾಗಿ ನಾಶಪಡಿಸಿದೆ’ ಎಂದಿದ್ದಾರೆ.ಹಿಂದಿನ ವಿವಾದಿತ ಹೇಳಿಕೆಗಳುರಾಹುಲ್ ಗಾಂಧಿ ಈ ಹಿಂದೆ ಮೋದಿ ಹೆಸರಿನವರೆಲ್ಲ ಕಳ್ಳ ಎಂದಿದ್ದರು. ಅದಕ್ಕಾಗಿ ಅವರಿಗೆ ಜೈಲು ಶಿಕ್ಷೆಯಾಗಿತ್ತು. ಮೋದಿ ಅವರನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಒಮ್ಮೆ ‘ಮೌತ್ ಕಾ ಸೌದಾಗರ್’ ಎಂದು ಕರೆದಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಣಿಶಂಕರ ಅಯ್ಯರ್ ಅವರು ಮೋದಿ ಅವರ ವ್ಯಾಪಾರ ಪ್ರಶ್ನಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಅವರನ್ನು 10 ತಲೆಯ ರಾವಣನಿಗೆ ಹೋಲಿಸಿದ್ದರು.